ಬೀಜಿಂಗ್, ಮೇ.22 (DaijiworldNews/PY): ನೈರುತ್ಯ ಚೀನಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮ ಮೂವರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ರಿಕ್ಟರ್ ಮಾಪಕದಲ್ಲಿ 7.3ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇದಾದ ಕೆಲವೇ ಗಂಟೆಗಳ ನಂತರ ಉತ್ತರಕ್ಕೆ ಸುಮಾರು 1,000 ಕಿ.ಮೀ. ದೂರವಿರುವ ಉತ್ತರ ಚೀನಾದ ಕಿಂಗ್ ಹೈ ಪ್ರಾಂತ್ಯದ ದಕ್ಷಿಣ ಭಾಗದಲ್ಲಿ ಶನಿವಾರ ಮುಂಜಾನೆ ಎರಡನೇ ಭೂಕಂಪನ ಸಂಭವಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಮೇರಿಕಾದ ಭೂವೈಜ್ಞಾನಿಕ ಸಮೀಕ್ಷೆ ಭೂ ಭೌತಶಾಸ್ತ್ರಜ್ಞ ಜೋನಾಥನ್ ಟೈಟೆಲ್ ಅವರು, "ಎರಡು ಭೂಕಂಪನಗಳಿಗೂ ಸಂಬಂಧವಿಲ್ಲ" ಎಂದಿದ್ದಾರೆ.
"ಯುನ್ನನ್ನ ಪ್ರವಾಸಿ ತಾಣವಾಗಿರುವ ದಲಿ ನಗರದಲ್ಲಿ ಶುಕ್ರವಾರ ರಾತ್ರಿ 9.48ರ ಸುಮಾರಿಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ" ಎಂದು ಅಮೇರಿಕಾದ ಜಿಯಾಲಾಜಿಕಲ್ ಸರ್ವೇ ಹೇಳಿಕೆ ನೀಡಿದೆ.