ಗೋಮಾ, ಮೇ.23 (DaijiworldNews/HR): ಕಾಂಗೋದ ಗೋಮಾ ನಗರ ಸಮೀಪವಿರುವ ಮೌಂಟ್ ನೈರಾಗೊಂಗೊದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಜನ ಸುರಕ್ಷಿತ ತಾಣಕ್ಕೆ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜನರು ರಾತ್ರೋರಾತ್ರಿ ಜ್ವಾಲಾಮುಖಿಯನ್ನು ಕಂಡು ಗೋಮಾ ನಗರ ಹಾಗೂ ಸುತ್ತಮುತ್ತಲಿನ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಪ್ರಯತ್ನಿಸಿದ್ದಾರೆ.
ಇನ್ನು ಗೋಮಾದಲ್ಲಿ 20 ಲಕ್ಷಕ್ಕೂ ಅಧಿಕ ಜನರಿದ್ದು, ಸದ್ಯಕ್ಕೆ ಯಾವುದೇ ಸಾವುನೋವು ಉಂಟಾಗಿಲ್ಲ ಎಂದು ವರದಿಯಾಗಿದೆ.
ಉತ್ತರ ಕಿವು ಪ್ರಾಂತ್ಯದ ಬೆನಿ ನಗರದಿಂದ ಗೋಮಾವನ್ನು ಸಂಪರ್ಕಿಸುವ ಒಂದು ಹೆದ್ದಾರಿಯನ್ನು ಜ್ವಾಲಾಮುಖಿ ಈಗಾಗಲೇ ಆವರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ತಿಳಿದು ಬಂದಿದೆ.