ಜಕಾರ್ತ, ಮೇ.23 (DaijiworldNews/PY): "ಫೆಬ್ರವರಿಯಲ್ಲಿ ಮ್ಯಾನ್ಮಾರ್ನಲ್ಲಿ ನಡೆದ ಸೇನಾ ದಂಗೆಯನ್ನು ವಿರೋಧಿಸಲು ನಾಗರಿಕ ಅಸಹಕಾರ ಚಳವಳಿಗೆ ಸೇರ್ಪಡೆಗೊಂಡಿದ್ದ ಕಾರಣ 1.25 ಲಕ್ಷಕ್ಕೂ ಅಧಿಕ ಶಾಲಾ ಶಿಕ್ಷಕರನ್ನು ಮಿಲಿಟರಿ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ" ಎಂದು ಶಿಕ್ಷಕರ ಒಕ್ಕೂಟದ ಅಧಿಕಾರಿಯೋರ್ವರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
"ಶಾಲಾ ವರ್ಷ ಆರಂಭವಾಗುವುದಕ್ಕೆ ಕೆಲವು ದಿನಗಳು ಬಾಕಿ ಇರುವಾಗಲೇ ಶಿಕ್ಷಕರ ಅಮಾನತು ಆದೇಶ ಪ್ರಕಟಿಸಲಾಗಿದೆ. ಶನಿವಾರದ ವೇಳೆಗೆ ಒಟ್ಟು 1,25,900 ಶಾಲಾ ಶಿಕ್ಷಕರನ್ನು ಅಮಾನತು ಮಾಡಲಾಗಿದೆ" ಎಂದು ಶಿಕ್ಷಕರ ಒಕ್ಕೂಟದ ಅಧಿಕಾರಿ ಮಾಹಿತಿ ನೀಡಿದ್ದಾರೆ.
"ಇದು ಕೇವಲ ಕೆಲಸಕ್ಕೆ ಹಾಜರಾಗುವಂತೆ ಜನರನ್ನು ಬೆದರಿಸುವ ತಂತ್ರವಾಗಿದೆ. ಜನರ ಮೇಲೆ ಸೇನೆ ನಡೆಸುತ್ತಿರುವ ದೌರ್ಜನ್ಯವನ್ನು ಇನ್ನೂ ನಿಲ್ಲಿಸದೇ ಇದ್ದರೆ ಇಡೀ ಪ್ರಜಾಪ್ರಭುತ್ವದ ವ್ಯವಸ್ಥೆ ಹದಗೆಡುತ್ತದೆ" ಎಂದು ಹೇಳಿದ್ದಾರೆ.