ಇಟಲಿ, ಮೇ 24 (DaijiworldNews/MS):ಉತ್ತರ ಇಟಲಿಯ ಮ್ಯಾಗಿಯೋರ್ ಸರೋವರದ ಬಳಿ ಪರ್ವತಗಳಿಗೆ ಸಂಪರ್ಕ ಕಲ್ಪಿಸುವ ಕೇಬಲ್ ಕಾರೊಂದು ಭಾನುವಾರ ನೆಲಕ್ಕುರುಳಿ ಬಿದ್ದ ಪರಿಣಾಮ ಒಂದು ಮಗು ಸೇರಿದಂತೆ ಕನಿಷ್ಟ ಹದಿನಾಲ್ಕು ಜನರು ಸಾವನ್ನಪ್ಪಿದ ಘಟನೆ ವರದಿಯಾಗಿದ್ದು ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ.
ರೆಸಾರ್ಟ್ ಪಟ್ಟಣವಾದ ಸ್ಟ್ರೆಸಾದಿಂದ ಪೀಡ್ಮಾಂಟ್ ಪ್ರದೇಶದ ಹತ್ತಿರದ ಮೊಟರೋನ್ ಪರ್ವತದವರೆಗೆ ಪ್ರಯಾಣಿಕರನ್ನು ಸಾಗಿಸುವ ಸೇವೆಯಲ್ಲಿ ಈ ಅಪಘಾತ ಸಂಭವಿಸಿದೆ.
ಮೃತಪಟ್ಟವರಲ್ಲಿ ಐವರು ಇಸ್ರೇಲಿ ಪ್ರಜೆಗಳು ಸೇರಿದ್ದಾರೆ. ವಿವಿಧ ದೇಶಗಳ ವಾಸಿಗಳು ಇದ್ದರು ಎನ್ನಲಾಗಿದ್ದು ಹಲವರ ಸ್ಥಿತಿ ಚಿಂತಾ ಜನಕ ವಾಗಿದೆ ಎಂದು ತಿಳಿದು ಬಂದಿದೆ. ಸ್ಟ್ರೀಸಾ ಮೊಟ್ಟರೊನ್ ಕೇಬಲ್ ಕಾರು ಸಮುದ್ರ ಮಟ್ಟದಿಂದ ಸರಿ ಸುಮಾರು 1.500 ಮಿಟರ್ ಎತ್ತರದಲ್ಲಿತ್ತು ಎನ್ನಲಾಗಿದೆ.20 ನಿಮಿಷ ದಲ್ಲಿ ಮೊಟ್ಟರೊನ್ ಪರ್ವತದಿಂದ ತುದಿಗೆ ಪ್ರವಾಸಿಗರನ್ನು ಕರೆದೋಯ್ಯುವ ಶಕ್ತಿ ಈ ಕಾರಿಗಿದೆ.