ಸಿಂಗಾಪುರ, ಮೇ25 (DaijiworldNews/MS): ಒಂದು ನಿಮಿಷದಲ್ಲಿ ಕೊರೊನಾ ಸೋಮ್ಕು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಸಿಂಗಾಪುರದ ನ್ಯಾಶನಲ್ ಯುನಿವರ್ಸಿಟಿ ಆಫ್ ಸಿಂಗಾಪುರದ ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದಾರೆ.
ಸಿಂಗಾಪುರದ ಆರೋಗ್ಯ ವಿಜ್ಞಾನ ಪ್ರಾಧಿಕಾರ (ಎಚ್ಎಸ್ಎ) ಮಂಗಳವಾರ ಕೋವಿಡ್ -19 ಅನ್ನು ಪತ್ತೆಹಚ್ಚಲು 60 ಸೆಕೆಂಡುಗಳ ಉಸಿರಾಟದ ಪರೀಕ್ಷೆಗೆ ತಾತ್ಕಾಲಿಕ ಅನುಮತಿಯನ್ನು ನೀಡಿದೆ. ಅದಕ್ಕೆ ಬ್ರೆಥಾನಿಕ್ಸ್ ಎಂಬ ಕಂಪನಿಯೂ ನೆರವು ನೀಡಿದೆ. ಇದಕ್ಕೆ ಭೆಫೆನ್ಸ್ ಗೋ ಕೋವೀಡ್ -19 ಎಂಬ ಹೆಸರು ನೀಡಲಾಗಿದೆ. ಈ ತಂಡದಲ್ಲಿ ಭಾರತೀಯ ಮೂಲದ ಪ್ರಾದ್ಯಾಪಕ ಟಿ. ವೆಂಕಿ ವೆಂಕಟೇಶನ್ ಎಂಬವರು ಹಾಗೂ ಮೂವರು ವಿದ್ಯಾರ್ಥಿಗಳು ಅದರ ಬಗ್ಗೆ ಸಂಶೋಧನೆ ನಡೆಸಿದ್ದಾರೆ.
ಉಸಿರಾಟದ ಪರೀಕ್ಷೆಗೆ ವೈದ್ಯಕೀಯವಾಗಿ ತರಬೇತಿ ಪಡೆದ ಸಿಬ್ಬಂದಿ ಅಥವಾ ಪ್ರಯೋಗಾಲಯದಲ್ಲಿ ಸಂಸ್ಕರಣೆ ಅಗತ್ಯವಿಲ್ಲ. ತರಬೇತಿ ಪಡೆದ ಸಿಬ್ಬಂದಿಗಳಿಂದ ಪರೀಕ್ಷೆಯನ್ನು ನಿರ್ವಹಿಸುವುದು ಸರಳವಾಗಿದೆ ಎಂದು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ
ಬ್ರೆಥಾನಿಕ್ಸ್ ಕಂಪನಿ ಈಗ ಆರೋಗ್ಯ ಸಚಿವಾಲಯದಿಂದ ಸಿಂಗಾಪುರ ಗಡಿ ಭಾಗಗಳಲ್ಲಿರುವ ಚೆಕ್ ಪೋಸ್ಟ್ ಗಳ ಮೂಲಕ ಹೊಸ ವ್ಯವಸ್ಥೆಯನ್ನು ಪ್ರಯೋಗಿಕವಾಗಿ ಬಳಕೆ ಮಾಡಿ ಅದನ್ನು ಪರೀಕ್ಷೆಗೆ ಒಡ್ಡಲು ಮುಂದಾಗಿದೆ. ಇದರ ಜತೆಗೆ ರ್ಯಾಪಿಡ್ ಅಂಟಿಜೆನ್ ಪರೀಕ್ಷೆ ಕೂಡಾ ನಡೆಸಲಾಗುತ್ತದೆ.