ಲಂಡನ್, ಮೇ.26 (DaijiworldNews/PY): ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಿಲಿಯಂ ಶೇಕ್ಸ್ಪಿಯರ್ (81) ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷ ಡಿಸೆಂಬರ್ 8ರಂದು ವಿಲಿಯಂ ಶೇಕ್ಸ್ಪಿಯರ್ ಅವರು ಯೂನಿವರ್ಸಿಟಿ ಹಾಸ್ಪಿಟಲ್ ಕೊವೆಂಟ್ರಿ ಹಾಗೂ ವಾರ್ವಿಕ್ ಶೈರ್ನಲ್ಲಿ ಕೊರೊನಾ ಸೋಂಕು ವಿರುದ್ದ ಹೋರಾಡಿದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ವಿಲಿಯಂ ಅವರು ಫೈಜರ್-ಬಯೋಟೆಕ್ ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ.