ಆಟಿಂಗೋವಾ, (DaijiworldNews/MS): ಆಟಿಂಗೋವಾದಿಂದಲೂ ಪರಾರಿಯಾಗಿದ್ದ ದೇಶ ಭ್ರಷ್ಟ ಡೈಮಂಡ್ ಉದ್ಯಮಿ ಮೆಹುಲ್ ಚೋಕ್ಸಿ ಸಣ್ಣ ಐಸ್ಲ್ಯಾಂಡ್ ದೇಶ ಡೊಮಿನಿಕಾದಲ್ಲಿ ಬಂಧಿತನಾಗಿದ್ದಾನೆ ಎಂದು ವರದಿಯಾಗಿದೆ.
ಮೆಹುಲ್ ಚೋಕ್ಸಿಯನ್ನು ಡೊಮಿನಿಕಾ ಪೊಲೀಸರಿಂದ ತಮ್ಮ ವಶಕ್ಕೆ ಪಡೆಯಲು ಆಂಟಿಗೋವಾ ಪೊಲೀಸರು ಸಿದ್ದತೆ ನಡೆಸುತ್ತಿದ್ದಾರೆ. 2018ರ ಜನವರಿಯಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಉದ್ಯಮಿ ಕಳೆದ ಕೆಲ ದಿನಗಳ ಹಿಂದೆ ಆಂಟಿಗುವಾ ಮತ್ತು ಬಾರ್ಬುಡಾದಿಂದಲೂ ನಾಪತ್ತೆಯಾಗಿದ್ದ .ಆಂಟಿಗೋವಾದಿಂದ ಪರಾರಿಯಾಗಿದ್ದ ಮೆಹುಲ್ ಚೋಸ್ಕಿಗೆ ಇಂಟರ್ಪೋಲ್ನಿಂದ ಯೆಲ್ಲೋ ನೋಟಿಸ್ ಜಾರಿ ಮಾಡಲಾಗಿತ್ತು. ಡೊಮಿನಿಕಾಗೆ ಪರಾರಿಯಾಗಿದ್ದ ಮೆಹುಲ್ ಚೋಸ್ಕಿ ಅಲ್ಲಿಂದ ಕ್ಯೂಬಾಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದ . ಹೀಗಾಗಿ ಸಣ್ಣ ದ್ವೀಪ ರಾಷ್ಟ್ರವಾದ ಡೊಮಿನಿಕಾವನ್ನು ದೋಣಿಯ ಮೂಲಕ ತಲುಪಿದ್ದಾನೆ. ಆದರೆ ಆತನ ವಿರುದ್ದ ಲುಕ್ ಔಟ್ ಸುತ್ತೋಲೆ ಯನ್ನು ಹೊರಡಿಸಿರುವುದರಿಂದ, ಅವನು ಸ್ಥಳೀಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ .
ಪಲಾಯನ ಮಾಡುವ ಅವರ ಪ್ರಯತ್ನವು ಆಂಟಿಗುವಾ ನ್ಯಾಯಾಲಯಗಳಲ್ಲಿ ತಮ್ಮ ಪ್ರಕರಣವನ್ನು ಬಲಪಡಿಸುತ್ತದೆ ಮತ್ತು ಅಲ್ಲದೆ ಅವರು ಶೀಘ್ರದಲ್ಲೇ ಭಾರತದಲ್ಲಿರುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.