ಟೋಕಿಯೊ, ಮೇ.28 (DaijiworldNews/PY): 12 ವರ್ಷ ಮೇಲ್ಪಟ್ಟವರಿಗೆ ಫೈಜರ್ ಲಸಿಕೆ ನೀಡಲು ಜಪಾನ್ ಆರೋಗ್ಯ ಸಚಿವಾಲಯದ ಸಮಿತಿ ಅನುಮೋದನೆ ನೀಡಿದೆ.
"ಜಪಾನ್ನಲ್ಲಿ ಈವರೆಗೆ 16 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿತ್ತು. ಈ ಲಸಿಕೆಗೆ ಅಮೇರಿಕಾ ಸೇರಿದಂತೆ ಇತರ ರಾಷ್ಟ್ರಗಳಲ್ಲೂ ಅನುಮೋದನೆ ನೀಡಿರುವುದನ್ನು ಪರಿಗಣಿಸಿದ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ
ಆರೋಗ್ಯ ಸಚಿವ ನೊರಿಹಿಸಾ ತಮುರಾ ಈ ಬಗ್ಗೆ ಮಾಹಿತಿ ನೀಡಿದ್ದು, "ಶೀಘ್ರವೇ ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ನಾನು ಬಯಸುತ್ತೇನೆ. ಹಾಗಾಗಿ ವ್ಯವಸ್ಥೆಗಳನ್ನು ಸರಾಗಗೊಳಿಸಬೇಕು ಎಂದು ನಾನು ಸ್ಥಳೀಯ ಸರ್ಕಾರಗಳಲ್ಲಿ ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.