ವಾಷಿಂಗ್ಟನ್ ,ಮೇ 29 (DaijiworldNews/MS): ಭಾರತಕ್ಕೆ ಅಗತ್ಯವಿರುವಷ್ಟು ಕೊರೊನಾ ಲಸಿಕೆ ಸರಬರಾಜು ಮಾಡಲು ಅಮೆರಿಕಾ ಸಹಮತ ವ್ಯಕ್ತಪಡಿಸಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿರುವ ಅವರು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಮತ್ತಿತರ ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಲಸಿಕೆಯ ಬಗ್ಗೆ ಹೆಚ್ಚಿನ ಚರ್ಚೆಗಳನ್ನು ನಡೆಸಿದ್ದು, ಅಮೆರಿಕದ ಸಹಾಯದೊಂದಿಗೆ ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನೆಯನ್ನು ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ' ಎಂದು ಹೇಳಿದ್ದಾರೆ.
'ಅಮೆರಿಕದ ಹೊಸ ಸರ್ಕಾರ ಮತ್ತು ಸಂಪುಟದ ಸದಸ್ಯರೊಂದಿಗೆ ಸಂಬಂಧವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಪ್ರಮುಖ ಗುರಿಯಾಗಿತ್ತು. ಈ ಭೇಟಿ ವೇಳೆ ನಾನು ನಾಯಕರೊಂದಿಗೆ ಕೋವಿಡ್ ಲಸಿಕೆಯ ಬಗ್ಗೆ ಹೆಚ್ಚಿನ ಚರ್ಚೆಗಳನ್ನು ಮಾಡಿದ್ದೇನೆ. ಕೋವಿಡ್ನ ಎರಡನೇ ಅಲೆಯ ವೇಳೆ ಅಮೆರಿಕವು ಭಾರತದೊಂದಿಗೆ ನಿಂತಿದೆ ಎಂದು ಹೇಳಿದ್ದಾರೆ.
ಅಮೆರಿಕದಿಂದ ಭಾರತಕ್ಕೆ ಲಸಿಕೆ ಪೂರೈಕೆಯಾಗುವ ಬಗ್ಗೆ ಜೈಶಂಕರ್ ಅವರು ಪ್ರತಿಕ್ರಿಯಿಸಿ,'ಲಸಿಕೆಗೆ ಸಂಬಂಧಿಸಿದಂತೆ ಕಾನೂನು, ವಾಣಿಜ್ಯ ಸೇರಿದಂತೆ ಇತರೆ ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದ್ದಾರೆ
ಇದೇ ವೇಳೆ ಭಾರತ ಮತ್ತು ಅಮೆರಿಕಾ ದೇಶಗಳು ಜಂಟಿಯಾಗಿ ಕೊರೊನಾ ಲಸಿಕೆ ಉತ್ಪಾದಿಸಿ ಇತರ ದೇಶ ಗಳಿಗೆ ಸರಬರಾಜು ಮಾಡಿದ ಪರಿಣಾಮ ಜಾಗತಿಕವಾಗಿ ಸೋಂಕಿನ ಪ್ರಮಾಣ ತಗ್ಗಲು ಸಾಧ್ಯವಾಯಿತು ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಇಲಾಖೆಯ ಸಹಾಯಕ ಕಾರ್ಯದರ್ಶಿ ಥಾಮ್ಸನ್ ತಿಳಿಸಿದ್ದಾರೆ.