ಚೀನಾ, ಜೂ 01(DaijiworldNews/MS): ಚೀನಾದ ನಾಗರಿಕನೊಬ್ಬನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು,ಇದು ವಿಶ್ವದಲ್ಲೇ H10N3 ಹಕ್ಕಿ ಜ್ವರ ಮನುಷ್ಯರಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ.
ಚೀನಾದ ಈಶಾನ್ಯ ಭಾಗದ ಜಿಯಾಂಗ್ಸು ಪ್ರಾಂತ್ಯದಲ್ಲಿ 41 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಮೇ 28ರಂದು ಆತನಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದೀಗ ಆತನ ಆರೋಗ್ಯ ಸ್ಥಿರವಾಗಿರುವುದಾಗಿ ಸರ್ಕಾರಿ ಸ್ವಾಮ್ಯದ ಸಿಜಿಟಿಎನ್ ಟಿವಿ ವರದಿ ಪ್ರಕಟಿಸಿದೆ.
H10N3 ಕಡಿಮೆ ರೋಗಕಾರಕ ವೈರಾಣುವಾಗಿದ್ದು, ಪೌಲ್ಟ್ರಿಗಳಲ್ಲಿ ಕಂಡುಬರುತ್ತದೆ. ಆರೋಗ್ಯ ಅಧಿಕಾರಿಗಳು ವಿರಳವಾದ ಈ ಸೋಂಕು ತೀವ್ರವಾಗಿ ಹರಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದುಸಾಂಕ್ರಾಮಿಕವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚೀನಾದಲ್ಲಿ ಏವಿಯನ್ ಶೀತಜ್ವರದ ಹಲವು ತಳಿಗಳಿದ್ದು, ಕೆಲವೊಂದು ವೈರಾಣುಗಳು ಪೌಲ್ಟ್ರಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ವಿರಳವಾಗಿ ಹರಡುತ್ತದೆ. ಎಚ್10ಎನ್3 ಸ್ಟ್ರೇನ್ ಬೇರೆಲ್ಲ ಸ್ಟ್ರೇನ್ಗಳಿಗಿಂತ ಅತ್ಯಂತ ಕಡಿಮೆ ಕಾಣಿಸಿಕೊಳ್ಳುತ್ತದೆ. ಈ ಸ್ಟ್ರೇನ್ನಿಂದ ಕೋಳಿಗಳಿಗೂ ಹೆಚ್ಚಿನ ಅಪಾಯವಿಲ್ಲ ಎಂದಿರುವ ಚೀನಾ ಈ ಸ್ಟ್ರೇನ್ ಮನುಷ್ಯನ ಮೇಲೆ ಹೇಗೆ ಹಬ್ಬಿತು ಎನ್ನುವುದಕ್ಕೆ ಯಾವುದೇ ವಿವರಣೆಯನ್ನು ನೀಡಿಲ್ಲ.