ಅಬುದಾಭಿ, ಜೂ.04 (DaijiworldNews/HR): 2012ರಲ್ಲಿ ಅವರು ಬೇಕಾಬಿಟ್ಟಿ ಕಾರು ಚಲಾಯಿಸಿ ಸೂಡಾನ್ನ ಬಾಲಕನ ಸಾವಿಗೆ ಕಾರಣರಾಗಿದ್ದ ಕೇರಳಿಗ ಬೆಕ್ಸ್ ಕೃಷ್ಣನ್ ಅವರನ್ನು ಯುಎಇಯ ಅಬಧಾಬಿಯಲ್ಲಿ ಮರಣದಂಡನೆಗೆ ಒಳಪಡಿಸಲಾಗಿದ್ದು, ಖ್ಯಾತ ಉದ್ಯಮಿ, ಲುಲು ಗ್ರೂಪ್ ಮುಖ್ಯಸ್ಥ ಎಂ.ಎ.ಯೂಸುಫ್ ಅಲಿ ಅವರು 1 ಕೋಟಿ ರೂ. ಪರಿಹಾರ ನೀಡಿ ಕೃಷ್ಣನ್ ರನ್ನು ರಕ್ಷಿಸಿದ್ದಾರೆ.
ಬೇಕಾಬಿಟ್ಟಿ ಕಾರು ಚಲಾಯಿಸಿ ಸೂಡಾನ್ನ ಬಾಲಕನ ಸಾವಿಗೆ ಕಾರಣರಾಗಿದ್ದ ಹಿನ್ನೆಲೆಯಲ್ಲಿ ಕೃಷ್ಣನ್ ಅವರಿಗೆ ಯುಎಇ ಸುಪ್ರೀಂ ಕೋರ್ಟ್ ಮರಣದಂಡನೆ ವಿಧಿಸಿತ್ತು.
ಇನ್ನು ದಿಕ್ಕು ತೊಚದ ಕೃಷ್ಣನ್ ಕುಟುಂಬ ಯೂಸುಫ್ ಅಲಿ ಅವರಿಗೆ ಸಮಸ್ಯೆ ವಿವರಿಸಿದ್ದು, ಬಾಲಕನ ಕುಟುಂಬವನ್ನು ಸುಡಾನ್ನಿಂದ ಕರೆಯಿಸಿಕೊಂಡು ಕುಟುಂಬಕ್ಕೆ ತಾವೇ 1 ಕೋಟಿ ರೂ. ಪರಿಹಾರಧನ ನೀಡಿದ್ದಾರೆ.
ಬಾಲಕನ ಕುಟುಂಬ ಕೃಷ್ಣನ್ರನ್ನು ಕ್ಷಮಿಸಲು ಒಪ್ಪಿದ್ದು, ಸುಪ್ರೀಂ ಕೋರ್ಟ್ ಕೂಡ ಕೃಷ್ಣನ್ ಅವರನ್ನು ಬಿಡುಗಡೆ ಮಾಡಿದೆ.
9 ವರ್ಷಗಳ ನಂತರ ಕೃಷ್ಣನ್ ಜೈಲಿನಿಂದ ಸದ್ಯದಲ್ಲೇ ಹೊರಬರಲಿದ್ದು, ಒಮ್ಮೆ ಯೂಸುಫ್ ಅಲಿಯನ್ನು ನೋಡಿ, ಕೃಷ್ಣನ್ ಅವರು ಕೇರಳಕ್ಕೆ ಹಿಂದಿರುಗುತ್ತಾರೆ ಎಂದು ವರದಿಯಾಗಿದೆ.