ನಜ್ರಾನ್, ಜೂ 05 (DaijiworldNews/MS): ಸೌದಿ ಅರೇಬಿಯಾದ ನಜ್ರಾನ್ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸ್ ಗಳು ಸಾವನ್ನಪ್ಪಿದ್ದಾರೆ.
ಮೃತರನ್ನು ತಿರುವನಂತಪುರಂ ಮೂಲದ ಅಶ್ವತಿ ವಿಜಯನ್ (31) ಮತ್ತು ಕೊಟ್ಟಾಯಂ ಮೂಲದ ಶಿನ್ಸಿ ಫಿಲಿಪ್ (28) ಎಂದು ಗುರುತಿಸಲಾಗಿದೆ.
ಇವರು ಪ್ರಯಾಣಿಸುತ್ತಿದ್ದ ವಾಹನವು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಈ ಅಪಘಾತ ಸಂಭವಿಸಿದೆ. ಇಬ್ಬರೂ ನಜ್ರಾನ್ನ ಕಿಂಗ್ ಖಾಲಿದ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು
ಇನ್ನೂ ಇಬ್ಬರು ದಾದಿಯರು ಮತ್ತು ವಾಹನದ ಚಾಲಕ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದ ಎಲ್ಲಾ ಪ್ರಯಾಣಿಕರು ಕೇರಳಿಗರಾಗಿದ್ದರು ಎಂದು ತಿಳಿದುಬಂದಿದೆ.