ದಕ್ಷಿಣ ಕೊರಿಯಾ, ಜೂ 05 (DaijiworldNews/MS): ತಂತ್ರಜ್ಞಾನದ ಈ ಯುಗದಲ್ಲಿ ಸ್ಮಾರ್ಟ್ ಫೋನ್ ನಿಶ್ಚಿತವಾಗಿ ಜನರ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸುತ್ತಿದೆ. ಆದರೆ, ಹಲವರಲ್ಲಿ ಈ ಸ್ಮಾರ್ಟ್ ಫೋನ್ ಬಳಕೆ ಒಂದು ಚಾಳಿಯಾಗಿ ಪರಿಣಮಿಸಿದೆ. ಕೆಲಸ ಇಲ್ಲ ಎಂದು ನಿಮಗೆ ಅನಿಸಿದರೆ, ಸ್ಮಾರ್ಟ್ ಫೋನ್ ಮೇಲೆ ಇಂಟರ್ನೆಟ್ ಸರ್ಫಿಂಗ್ ಮಾಡುವುದನ್ನು ಮಾಮೂಲಾಗಿ ಬಿಟ್ಟಿದೆ ಎದುರಿಗಿರುವ ವ್ಯಕ್ತಿಯನ್ನು ಬೇಕಾದ್ರೂ ಮರೆಯಬಹುದು, ಆದರೆ ಫೋನ್ ಮಾತ್ರ ಮರೆಯುವ ಹಾಗಿಲ್ಲ. ಇನ್ನು ಹಾದಿ ಬೀದಿಯಲ್ಲೂ ಹೆಜ್ಜೆ ಹಾಕುವಾಗಲೂ ಹಲವರ ಲಕ್ಷ್ಯ ಮಾತ್ರ ದಾರಿ ಕಡೆಗಿರದೆ, ತಲೆ ಬಗ್ಗಿಸಿ ಮೊಬೈಲ್ ನೋಡುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ.
ಹೀಗೆ ರಸ್ತೆಯ ಪರಿವೇ ಇಲ್ಲದೆ ಮೊಬೈಲ್ ನೋಡುತ್ತಾ ನಡೆಯುವವರಿಗಾಗಿ ಬಂದಿದೆ " ಮೂರನೇ ಕಣ್ಣು " . ತಲೆ ಬಗ್ಗಿಸಿ ನಡೆದು ಕಂಬಕ್ಕೋ ಇನ್ಯಾವುದಕ್ಕೋ ಢಿಕ್ಕಿ ಹೊಡೆಯುವುದನ್ನು , ಬೀಳುವುದನ್ನು ತಪ್ಪಿಸಲೆಂದೇ ಇದನ್ನು ಅವಿಷ್ಕರಿಸಲಾಗಿದೆ.
"ಸ್ಮಾರ್ಟ್ ಪೋನ್ ಸೋಮಾರಿಗಳು" ತಮ್ಮ ಮೊಬೈಲ್ ಪರದೆಯ ಮೇಲೆ ಕಣ್ಣುಗಳನ್ನು ಕೇಂದ್ರೀಕರಿಸುವಾಗ ಅವರ ರಕ್ಷಣೆಗಾಗಿ "ಮೂರನೇ ಕಣ್ಣು" ಅನ್ನು ಕಂಡುಹುಡುಕಲಾಗಿದೆ.
ದಕ್ಷಿಣ ಕೊರಿಯಾದ ಕೈಗಾರಿಕಾ ವಿನ್ಯಾಸಕ ಪಾಂಗ್ ಮಿನ್-ವೂಕ್, ಇದನ್ನು ಅವಿಷ್ಕರಿಸಿದ್ದು, " ರೋಬಾಟ್ ಕಣ್ಣುಗುಡ್ಡೆ" ಯನ್ನು ವ್ಯಕ್ತಿಯ ಹಣೆಗೆ ಕಟ್ಟಬಹುದು, ಇದರಿಂದಾಗಿ ಗಾಯ-ಮುಕ್ತವಾಗಿ ಬ್ರೌಸ್ ಮಾಡಲು ಅವಕಾಶ ನೀಡುತ್ತದೆ ಎಂದಿದ್ದಾರೆ.
ಈ ಸಾಧನವು "ವಿಡಂಬನಾತ್ಮಕ ಪರಿಹಾರ" ವಾಗಿದ್ದು, ಇದರಿಂದ ಜನರು "ತಮ್ಮ ಗ್ಯಾಜೆಟ್ ಚಟದ ತೀವ್ರತೆಯನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಆಶಿಸಿದ್ದಾರೆ. ಈ ಸಾಧನವನ್ನು - ಥರ್ಡ್ ಐ ಎಂದಿರುವ ಅವರು ಫೋನ್ ನೋಡಲು ಬಳಕೆದಾರರ ತಲೆಯನ್ನು ಕೆಳಕ್ಕೆ ಬಗ್ಗಿಸಿದಾಗ ಅದು ಸಂವೇದಿಸುತ್ತದೆ ಮತ್ತು ಅದು ಅದರ ಅರೆಪಾರದರ್ಶಕ ಕಣ್ಣುರೆಪ್ಪೆಯನ್ನು ತೆರೆಯುತ್ತದೆ.
ಆ ವ್ಯಕ್ತಿಗೆ ಒಂದು ಅಥವಾ ಎರಡು ಮೀಟರ್ ನಲ್ಲಿ ಮುಂದೆ ತಡೆ ಬಂದಾಗ, ಮೂರನೆಯ ಕಣ್ಣು ಅವರಿಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತದೆ.
ಈ ಮೂರನೇ ಕಣ್ಣು ಭವಿಷ್ಯದ ಮಾನವಕುಲದ ನೋಟವಾಗಿದೆ.ನಾವು ಸ್ಮಾರ್ಟ್ಫೋನ್ಗಳಿಂದ ನಮ್ಮ ಕಣ್ಣುಗಳನ್ನು ತೆಗೆಯಲು ಸಾಧ್ಯವಿಲ್ಲದ ಕಾರಣ, ಭವಿಷ್ಯದಲ್ಲಿ ಹೆಚ್ಚುವರಿ ಕಣ್ಣು ಬೇಕಾಗುತ್ತದೆ. ಹೀಗಾಗಿ "ಥರ್ಡ್ ಐ ವಿಡಂಬನಾತ್ಮಕ ಪರಿಹಾರ" ವಾಗಿದೆ ಎಂದು ಪೇಂಗ್ ಮಿನ್-ವೂಕ್ ಅಭಿಪ್ರಾಯವಾಗಿದೆ.