ಕ್ಯಾಲಿಫೋರ್ನಿಯಾ, ಜೂ 07 (DaijiworldNews/MS): ಬ್ರಿಟನ್ ರಾಜಮನೆತನದ ರಾಜಕುಮಾರ ಹ್ಯಾರಿ -ಮೇಘನ್ ದಂಪತಿಗೆ ಹೆಣ್ಣು ಮಗು ಜನನವಾಗಿದ್ದು, ಮಗುವಿಗೆ 'ಲಿಲ್ಲಿಬೆಟ್' ಡಯಾನಾ ಎಂದು ಹೆಸರಿಡಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಬಿಡುಗಡೆಗೊಳಿಸಿದ್ದು, ಜೂ.4 ರ ಶುಕ್ರವಾರ 11.40ಕ್ಕೆ ಕ್ಯಾಲಿಫೋರ್ನಿಯಾದ ಸಂಟಾ ಬರ್ಬರಾ ಕಾಟೇಜ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಮಗು 3.486 ಕಿಲೋ ಗ್ರಾಂ ತೂಕವಿತ್ತು ಎಂದು ಪ್ರಕಟಣೆ ತಿಳಿಸಿದೆ.
ಮಗುವಿನ ಆಗಮನದ ಕುರಿತು ಹೇಳಿಕೆ ನೀಡಿರುವ ಹ್ಯಾರಿ -ಮೇಘನ್ ' ನಮಗೆ ಹೆಣ್ಣುಮಗಳು ಲಿಲಿಯ ಆಗಮನದ ಆಶೀರ್ವಾದ ಸಿಕ್ಕಿದೆ. ನಾವು ಊಹಿಸಿದ್ದಕ್ಕಿಂತಲೂ ಆಕೆ ಮುದ್ದಾಗಿದ್ದಾಳೆ. ಜಗತ್ತಿನೆಲ್ಲೆಡೆಯಿಂದ ನಮಗೆ ದೊರೆತ ಪ್ರೀತಿ ಹಾಗೂ ಪ್ರಾರ್ಥನೆಗಳಿಗಾಗಿ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ' ಎಂದು ಹೇಳಿದ್ದಾರೆ.
ಹೆಮಗುವಿಗೆ ಮಗುವಿಗೆ ಲಿಲ್ಲಿಬೆಟ್ (ಲಿಲ್ಲಿ ಡಯನಾ) ಎಂದು ನಾಮಕರಣ ಮಾಡಲಾಗಿದೆ. ಲಿಲ್ಲಿಬೆಟ್ ಎಂಬುದು ಆಕೆಯ ಮುತ್ತಜ್ಜಿ ರಾಣಿ ಎಲಿಜಬೆತ್ II ಹೆಸರಾಗಿದೆ ಎನ್ನಲಾಗಿದೆ. ರಾಣಿ ಎಲಿಜಬೆತ್ II ಅವರನ್ನು ಕುಟುಂಬ ಸದಸ್ಯರು ಲಿಲಿಬೆಟ್ ಎಂದು ಕರೆಯತ್ತಿದ್ದರು ಎನ್ನಲಾಗಿದೆ. ಅಜ್ಜಿ, ವೇಲ್ಸ್ ರಾಜಕುಮಾರಿಯ ಗೌರವಾರ್ಥವಾಗಿ ಈ ಹೆಸರಿಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಮೆಜೆಸ್ಟಿ ದಿ ಕ್ವೀನ್ಸ್ ಎಂದು ನಿಕ್ ನೇಮ್ ಇರಿಸಲಾಗಿದೆ.
ಹ್ಯಾರಿ ಮತ್ತು ಅಮೇರಿಕನ್ ನಟಿ ಮೇಘನ್ ಮಾರ್ಕೆಲ್ ಅವರು ಮೇ 2018 ರಲ್ಲಿ ವಿಂಡ್ಸರ್ ಕ್ಯಾಸಲ್ನಲ್ಲಿ ವಿವಾಹವಾದರು. ಅವರ ಮಗ ಆರ್ಚೀ ಒಂದು ವರ್ಷದ ನಂತರ ಜನಿಸಿದ್ದ. ರಾಜಮನೆತನದ ಜವಾಬ್ದಾರಿಗಳಿಂದ ಕೆಳಕ್ಕಿಳಿದು ಅಮೆರಿಕಕ್ಕೆ ತೆರಳಿ ಅಲ್ಲಿ ಸ್ವತಂತ್ರ ಜೀವನ ಸಾಗಿಸುತ್ತಿದ್ದಾರೆ.