ಡರ್ಬನ್, ಜೂ 8 (DaijiworldNews/MS): ಆರು ದಶಲಕ್ಷ ಆಪ್ರಿಕನ್ ರಾಂಡ್ (3.22 ಕೋಟಿ ಅಂದಾಜು ) ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ನ ನ್ಯಾಯಾಲಯವು ಮಹತ್ಮಾ ಗಾಂಧಿಯವರ ಅವರ ಮರಿ ಮೊಮ್ಮಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
56 ವರ್ಷದ ಆಶಿಶ್ ಲತಾ ರಾಮ್ಗೋಬಿನ್ ಅವರನ್ನು ತಪ್ಪಿತಸ್ಥರೆಂದು ನ್ಯಾಯಾಲಯವು ಸೋಮವಾರ ತೀರ್ಪು ಪ್ರಕಟಿಸಿದ್ದು, ಪ್ರಕರಣದಲ್ಲಿ ಲತಾ ಅವರಿಗೆ ಶಿಕ್ಷೆ ವಿಧಿಸಿರುವ ಡರ್ಬನ್ ವಾಣಿಜ್ಯ ವ್ಯಾಜ್ಯಗಳ ವಿಶೇಷ ನ್ಯಾಯಾಲಯ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಲಾವಕಾಶವನ್ನೂ ನಿರಾಕರಿಸಿದೆ.
ಆಶಿಶ್ ಲತಾ ರಾಮ್ಗೋಬಿಂದ್ ಅವರು ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ಎಲಾ ಗಾಂಧಿ ಮತ್ತು ಮೇವಾ ರಾಮ್ಗೋಬಿಂದ್ ಅವರ ಪುತ್ರಿಯಾಗಿದ್ದಾರೆ. , ಇವರು ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿಯವರು ಸ್ಥಾಪಿಸಿದ ಫೀನಿಕ್ಸ್ ಇತ್ಯರ್ಥವನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ತಾವು ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ ದಕ್ಷಿಣ ಆಫ್ರಿಕಾದ ಉದ್ಯಮಿ ಎಸ್.ಆರ್ ಮಹರಾಜ್ ಎಂಬುವವರ ಬಳಿ ಲತಾ 6.2 ದಶಲಕ್ಷ ರಾಂಡ್ ಪಡೆದಿದ್ದರು. ತಾವು ಗಳಿಸಿದ ಲಾಭದ ಒಂದು ಭಾಗದ ಅವರಿಗೆ ನೀಡುವುದಾಗಿ ಭರವಸೆನೀಡಿದ್ದರು. ಆದರೆ ಬಳಿಕ ಲತಾ ನಂತರದಲ್ಲಿ ಉದ್ಯಮಿಗೆ ವಂಚಿಸಿದ್ದ ಆರೋಪ ಎದುರಿಸುತ್ತಿದ್ದರು.
ಲತಾ ವಿರುದ್ಧ 2015ರಿಂದಲೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಸಂದರ್ಭದಲ್ಲಿ ಮಾತನಾಡಿದ್ದ ರಾಷ್ಟ್ರೀಯ ಪ್ರಾಸಿಕ್ಯೂಟಿಂಗ್ ಪ್ರಾಧಿಕಾರದ (ಎನ್ಪಿಎ) ಬ್ರಿಗೇಡಿಯರ್ ಹಂಗ್ವಾನಿ ಮುಲಾಡ್ಜಿ, "ಭಾರತದಿಂದ ಮೂರು ಕಂಟೇನರ್ ಲೆನಿನ್ ಬಟ್ಟೆಗಳನ್ನು ತರುತ್ತಿರುವುದಾಗಿ ಉದ್ಯಮಿಯನ್ನು ನಂಬಿಸಲು ಲತಾ ಅವರು ನಕಲಿ ಇನ್ವಾಯ್ಸ್ ಮತ್ತು ದಾಖಲೆಗಳನ್ನು ಒದಗಿಸಿದ್ದರು" ಎಂದು ಹೇಳಿದ್ದರು. ಈ ನಡುವೆ, ಲತಾ ರಾಮ್ಗೋಬಿನ್ ಅವರು 50 ಸಾವಿರ ರಾಂಡ್ಗ ಭದ್ರತೆ ನೀಡಿ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು.
ಲತಾ ರಾಮ್ಗೋಬಿನ್ ಅವರು 2015ರ ಆಗಸ್ಟ್ನಲ್ಲಿ ‘ನ್ಯೂ ಆಫ್ರಿಕಾ ಅಲೈಯನ್ಸ್’ ಕಂಪನಿ ನಿರ್ದೇಶಕ ಮಹಾರಾಜ್ ಅವರನ್ನು ಭೇಟಿ ಮಾಡಿದ್ದರು. ನ್ಯೂ ಆಫ್ರಿಕಾ ಅಲೈಯನ್ಸ್ ಕಂಪನಿಯು ಲೆನಿನ್ ಬಟ್ಟೆ ಮತ್ತು ಪಾದರಕ್ಷೆಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ. ಮಹಾರಾಜ್ ಅವರ ಕಂಪನಿಯು ಲಾಭ-ಷೇರು ಆಧಾರದ ಮೇಲೆ ಇತರ ಕಂಪನಿಗಳಿಗೆ ಹಣಕಾಸು ನೆರವು ಒದಗಿಸುತ್ತದೆ. ದಕ್ಷಿಣ ಆಫ್ರಿಕಾದ ನೆಟ್ಕೇರ್ ಆಸ್ಪತ್ರೆ ಸಮೂಹಗಳಿಗೆ ವಿತರಿಸಲೆಂದು ಭಾರತದಿಂದ ಮೂರು ಕಂಟೇನರ್ ಲಿನಿನ್ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದಾಗಿ ಲತಾ ರಾಮ್ಗೋಬಿನ್ ಮಹಾರಾಜ್ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ಕೊನೆಯಲ್ಲಿ ಮಹಾರಾಜ್ ಅವರಿಗೆ ನೀಡಲಾಗಿದ್ದ ದಾಖಲೆಗಳು ನಕಲಿ ಎಂದು ತಿಳಿದುಬಂದಿತ್ತು ಇದಾದ ಬಳಿಕ ಅವರು ಲತಾ ವಿರುದ್ಧ ಪ್ರಕರಣ ದಾಖಲಿಸಿದರು.
ಲತಾ ರಾಮ್ಗೋಬಿನ್ರ ಸೋದರಸಂಬಂಧಿ ಕೀರ್ತಿ ಮೆನನ್, ದಿವಂಗತ ಸತೀಶ್ ಧುಪೆಲಿಯಾ ಮತ್ತು ಉಮಾ ಧುಪೆಲಿಯಾ-ಮೆಸ್ಟ್ರಿ ಸೇರಿದಂತೆ ಮಹಾತ್ಮ ಗಾಂಧಿಯವರ ಅನೇಕ ವಂಶಸ್ಥರು ಆಫ್ರಿಕಾದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ.