ವಾಷಿಂಗ್ಟನ್, ಜೂ.10 (DaijiworldNews/HR): "ಅಮೇರಿಕಾ ಬೆಂಬಲಿತ 'ಕೋವ್ಯಾಕ್ಸ್' ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮದಡಿ ಬಳಕೆಯಾಗದ 8 ಕೋಟಿ ಡೋಸ್ ಲಸಿಕೆಗಳಲ್ಲಿ ಭಾರತಕ್ಕೂ ಹಂಚಿಕೆ ಮಾಡಲಾಗುವುದು" ಎಂದು ಅಮೇರಿಕಾದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೇರಿಕಾದ ಕೋವಾಕ್ಸ್ ಕಾರ್ಯಕ್ರಮದಡಿ 2.5 ಕೋಟಿ ಬಳಕೆಯಾಗದ ಡೋಸ್ಗಳ ಪೈಕಿ ಮೊದಲ ಹಂತದಲ್ಲಿ ಶೇಕಡ 75ರಷ್ಟು ಡೋಸ್ ಲಸಿಕೆಯನ್ನು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಮತ್ತು ಆಫ್ರಿಕಾಗೆ ಹಂಚಿಕೆ ಮಾಡುವುದಾಗಿ ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದರು.
ಇನ್ನು ಜಾಗತಿಕವಾಗಿ ಹಂಚಲಾಗುವ 8 ಕೋಟಿ ಡೋಸ್ ಲಸಿಕೆಗಳಲ್ಲಿ ಭಾರತಕ್ಕೂ ನೀಡಲಾಗುವುದು. ಇದರಲ್ಲಿ ಬಹುಶಃ 60 ಲಕ್ಷ ಡೋಸ್ಗಳನ್ನು ಭಾರತಕ್ಕೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭಾರತವು ಕೊರೊನಾದಿಂದ ತೀವ್ರ ಕಷ್ಟದಲ್ಲಿದ್ದು, ನಾವು ಈ ಮೊದಲೇ ಲಸಿಕೆಯನ್ನು ಹಂಚಿಕೆ ಮಾಡಬೇಕು ಎಂದುಕೊಂಡಿದ್ದೆವು, ಭಾರತಕ್ಕೆ ನೆರವಾಗುವ ಮೂಲಕ ನಾವು ಪಾಲುದಾರಿಕೆಯನ್ನು ನಿಭಾಯಿಸುತ್ತಿದ್ದೇವೆ" ಎಂದು ಅಧಿಕಾರಿ ಹೇಳಿದ್ದಾರೆ.