ಡೊಮಿನಿಕಾ, ಜೂ 12 (DaijiworldNews/MS): ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ. ವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಜಾಮೀನು ಅರ್ಜಿಯನ್ನು ಡೊಮಿನಿಕಾ ಕೋರ್ಟ್ ವಜಾಗೊಳಿಸಿದೆ.
ಶುಕ್ರವಾರ ನ್ಯಾಯಾಲಯದಲ್ಲಿ ಮೆಹುಲ್ ಚೋಕ್ಸಿ ಪರ ವಕೀಲರು, ತಮ್ಮ ಕ್ಲೈಂಟ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಕ್ಯಾರಿಕೊಮ್ (ಕೆರಿಬಿಯನ್ ಸಮುದಾಯ) ಪ್ರಜೆಯಾಗಿ, ದಂಡ ಪಾವತಿಸಿ ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ವಾದಿಸಿದ್ದಾರೆ. ಡೊಮೆನಿಕಾದ ವಕೀಲರು ರೆ ವಲಸಿಗ ಹಾಗೂ ಇಂಟರ್ಪೋಲ್ ರೆಡ್ ನೋಟಿಸ್ ಕಾರಣ ನೀಡಿ ಚೋಕ್ಸಿ ಜಾಮೀನು ವಿರೋಧಿಸಿದರು. ವಾದ ಅಲಿಸಿದ ನ್ಯಾಯಾಲಯ ಮೆಹುಲ್ ಚೋಕ್ಸಿ ಅಕ್ರಮವಾಗಿ ಡೊಮಿನಿಕಾ ಪ್ರವೇಶಿಸಿದ ವಲಸಿಗ ಎಂದು ಡೊಮಿನಿಕಾ ಸರ್ಕಾರ ಹೇಳಿದ್ದು, ಮೆಹುಲ್ ಚೋಕ್ಸಿ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಮೆಹುಲ್ ಚೋಕ್ಸಿ ಭಾರತದಿಂದ 2018ರಿಂದ ಪರಾರಿಯಾಗಿದ್ದು, ಆಂಟಿಗುವಾ ಮತ್ತು ಬರ್ಬುಡಾ ದೇಶದಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಆಯಂಟಿಗಾದಿಂದ ನಾಪತ್ತೆಯಾಗಿದ್ದ ಚೋಕ್ಸಿಯನ್ನು ಮೇ 26 ಡೊಮಿನಿಕಾ ದೇಶದಲ್ಲಿ ಬಂಧಿಸಲಾಗಿತ್ತು. ಇನ್ನು ಡೊಮಿನಿಕಾ ದೇಶದೊಳಗೆ ಅಕ್ರಮ ಪ್ರವೇಶ ಮಾಡಿದ ಕಾರಣಕ್ಕೆ ಮೆಹುಲ್ ಚೋಕ್ಸಿಯನ್ನು ಆ ದೇಶದ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು.