ಜೆರುಸಲೇಂ, ಜೂ 14(DaijiworldNews/MS): ಇಸ್ರೇಲ್ನಲ್ಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು 12 ವರ್ಷಗಳ ಆಡಳಿತ ಅಂತ್ಯಗೊಂಡಿದ್ದು, ಎಂಟು ವಿಭಿನ್ನ ಸಿದ್ದಾಂತಗಳನು ಹೊಂದಿರುವ ಪಕ್ಷಗಳ ಸರಕಾರ ಇಸ್ರೇಲ್ನಲ್ಲಿ ಅಸ್ತಿತ್ವಕ್ಕೆ ಬಂದಿದೆ. ರಾಷ್ಟ್ರೀಯವಾದಿ ನೆಫ್ತಾಲಿ ಬೆನೆಟ್ ಸಮ್ಮಿಶ್ರ ಸರ್ಕಾರದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಅತ್ಯಲ್ಪ ಬಹುಮತ 60-59 ರಿಂದ ಸರ್ಕಾರ ರಚನೆ ಮಾಡಲಾಗಿದ್ದು, ಅಧಿಕಾರ ಹಂಚಿಕೆಯ ಸೂತ್ರದ ಭಾಗವಾಗಿ 2023 ರ ಸೆಪ್ಟೆಂಬರ್ ತಿಂಗಳವರೆಗೂ ನಫ್ತಾಲಿ ಬೆನೆಟ್ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಅನಂತರದ 2 ವರ್ಷಗಳನ್ನು ಯೆಶ್ ಅತಿಡ್ ಪಕ್ಷದ ಯೈರ್ ಲೆಪಿಡ್ ಪ್ರಧಾನಿಯಾಗಲಿದ್ದಾರೆ.
ಇಸ್ರೇಲ್ನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಡಪಂಥೀಯ ಅರಬ್ ಯೇತರ ಪಕ್ಷಗಳು, ಸ್ವತಂತ್ರ ಅರಬ್ ಪಕ್ಷ ರಾಮ್ ರಾಷ್ಟ್ರೀಯವಾದಿ ನೆಫ್ತಾಲಿ ಬೆನ್ನೆಟ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದು, ವಿಚಿತ್ರವೆಂದರೆ ಸೈದ್ಧಾಂತಿಕ ಭಿನ್ನಾಭಿಪ್ರಾಗಳನ್ನು ಹೊಂದಿರುವ ಪಕ್ಷಗಳೇ ಸರ್ಕಾರ ರಚಿಸಿರುವುದು ಅಚ್ಚರಿ ಕಾರಣವಾಗಿದ್ದು ಇದರಿಂದಾಗಿ 12 ವರ್ಷಗಳಿಂದ ಅಧಿಕಾರದಲ್ಲಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷ ವಿಪಕ್ಷದಲ್ಲಿ ಕೂರುವ ಸ್ಥಿತಿ ಬಂದೊಂದಗಿದೆ.
ಇದೇ ವೇಳೆ ಸಂಸತ್ ನಲ್ಲಿ ನಡೆದ ಚರ್ಚೆಯ ವೇಳೆ ನಾವು ಶೀಘ್ರವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ.ನೂತನ ಪ್ರಧಾನಿ ನಫ್ಟಾಲಿ ಬೆನ್ನೆಟ್ ಮಾತನಾಡಿ ಅಮೆರಿಕದ ಜತೆಗೂಡಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.