ಇಸ್ಲಾಮಾಬಾದ್, ಜೂ 16 (DaijiworldNews/PY): ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಅಕ್ಟೋಬರ್ 5ಕ್ಕೆ ಮುಂದೂಡಿದೆ.
ಕುಲಭೂಷಣ್ ಜಾಧವ್ ಪರವಾಗಿ ವಕೀಲರನ್ನು ನೇಮಿಸುವಂತೆ ಕೋರಿ ಪಾಕಿಸ್ತಾನದ ಜನರಲ್ ಖಾಲೀದ್ ಜಾವೇದ್ ಖಾನ್ ಅವರು ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಅಕ್ಟೋಬರ್ 5ರಂದು ವಿಚಾರಣೆ ನಡೆಸುವುದಾಗಿ ಇಸ್ಲಾಮಾಬಾದ್ ಹೈಕೋರ್ಟ್ ತಿಳಿಸಿದೆ. ಮುಂದಿನ ವಿಚಾರಣೆಯ ಸಂದರ್ಭ ಭಾರತೀಯ ಹೈಕಮೀಷನನ್ ವಕೀಲರು ಹಾಜರಾಗಬೇಕು ಎಂದು ನೋಟಿಸ್ ಜಾರಿ ಮಾಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಅಥಲ್ ಮಿನಾಲಾ, ಅಮರ್ ಫಾರೂಕ್ ಹಾಗೂ ಮಿಯಾಂಗುಲದದ ಹಸನ್ ಔರಂಗಜೇಬ್ ಅವರಿದ್ದ ನ್ಯಾಯಪೀಠ, ಮೇ 7ರಂದು ನಡೆದಿದ್ದ ವಿಚಾರಣೆಯ ಸಂದರ್ಭ ಜೂನ್ 15ರೊಳಗೆ ಕುಲಭೂಷನ್ ಜಾಧವ್ ಪರ ವಾದ ಮಂಡಿಸಲು ವಕೀಲರ ನೇಮಕ ಮಾಡಿಸುವಂತೆ ಸೂಚನೆ ನೀಡಿತ್ತು.