ಜಿನಿವಾ,ಜೂ 18 (DaijiworldNews/MS): ದಶಕಗಳ ಬಳಿಕ ಅಮೆರಿಕ ಹಾಗೂ ರಷ್ಯಾ ನಾಯಕರು ಪರಸ್ಪರ ಭೇಟಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಜಿನೀವಾದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಸಭೆಯ ನೆನಪಿಗಾಗಿ ಅಧ್ಯಕ್ಷ ಜೋ ಬಿಡನ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗಾಗಿ ಅಮೆರಿಕನ್ ನಿರ್ಮಿತ ಸನ್ ಗ್ಲಾಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
23 ಕ್ಯಾರೆಟ್ ನ ಚಿನ್ನದ ಫಿನಿಶ್ನಲ್ಲಿ ರಾಂಡೋಲ್ಫ್ ಎಂಜಿನಿಯರಿಂಗ್ ತಯಾರಿಸಿದ "ಕಾನ್ಕಾರ್ಡ್" ಶೈಲಿ ಸನ್ ಗ್ಲಾಸ್ ಇದಾಗಿದ್ದು, ಇದನ್ನು ತಯಾರಿಸಲು 200 ಹೆಚ್ಚು ಹಂತಗಳಿದ್ದು ಸೂಮಾರು 6 ವಾರಗಳ ಕಾಲಾವಕಾಶ ಬೇಕಾಗುತ್ತದೆ. ಗಾಢಾ ಕಪ್ಪು ಬಣ್ಣದ ರಾಂಡೋಲ್ಫ್ ವೆಬ್ಸೈಟ್ನಲ್ಲಿ 279 ಡಾಲರ್ ಕ್ಕೆ ಮಾರಾಟವಾಗುತ್ತದೆ.
ಕನ್ನಡಕವನ್ನು ಬಲ ಮಸೂರದ ಒಳ ಭಾಗದಲ್ಲಿ ಜೋ ಬಿಡೆನ್ ಸಹಿಯೊಂದಿಗೆ ಕಸ್ಟಮೈಸ್ ಮಾಡಲಾಗಿದೆ. ಅಮೇರಿಕಾದ ಈಶಾನ್ಯ ರಾಜ್ಯವಾದ ಮ್ಯಾಸಚೂಸೆಟ್ಸ್ನ ಒಂದು ಸಣ್ಣ ಪಟ್ಟಣದಲ್ಲಿ ತಯಾರಿಸಲಾಗುತ್ತದೆ್. 1973 ರಲ್ಲಿ ಸ್ಥಾಪನೆಯಾದ ಕಂಪನಿಯು "ಅಮೇರಿಕಾದಲ್ಲಿ ಕರಕುಶಲ"ವಸ್ತುಗಳಿಗೆ ಹೆಸರುವಾಸಿಯಾಗಿದೆ
"ಅಧ್ಯಕ್ಷ ಬಿಡೆನ್, ನಮ್ಮ ರಾಷ್ಟ್ರೀಯ ಪರಂಪರೆಯ ಸಂಕೇತವಾಗಿ ಆ ಕನ್ನಡಕವನ್ನು ಅಧ್ಯಕ್ಷ ಪುಟಿನ್ ಅವರಿಗೆ ನೀಡಿದ್ದಾರೆ, ಇದು ಶಾಂತಿಯ ಸಂಕೇತವೆಂದು ಭಾವಿಸೋಣ" ಎಂದು ರಾಂಡೋಲ್ಫ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪೀಟರ್ ವಾಸ್ಜ್ಕಿವಿಜ್ ಹೇಳಿದ್ದಾರೆ