ಒಂಟಾರಿಯೋ, ಜೂ. 18 (DaijiworldNews/HR): ಕೆನಡಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಾರತೀಯ ಮೂಲದ ಮಹ್ಮೂದ್ ಜಮಾಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೊ ಮಾಹಿತಿ ನೀಡಿದ್ದಾರೆ.
ನೈರೋಬಿಯಲ್ಲಿ 1967ರಲ್ಲಿ ಭಾರತೀಯ ಕುಟುಂಬವೊಂದರಲ್ಲಿ ಜನಿಸಿದ್ದ ಮಹ್ಮೂದ್ ಜಮಾಲ್ ಮುಂದೆ ಬ್ರಿಟನ್ನಲ್ಲಿ ಬೆಳೆದ ಅವರು ನಂತರ 1981ರಲ್ಲಿ ತಮ್ಮ ಕುಟುಂಬದೊಂದಿಗೆ ಕೆನಡಾಗೆ ಬಂದು ನೆಲೆಸಿದ್ದರು ಎನ್ನಲಾಗಿದೆ.
ಇನ್ನು 2019ರಿಂದ ಒಂಟಾರಿಯೋ ನ್ಯಾಯಾಲಯದಲ್ಲಿ ಅಪೀಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಮಹ್ಮೂದ್ ಜಮಾಲ್ ಕಳೆದೆರಡು ದಶಕಗಳಿಂದ ವಕೀಲರಾಗಿ ಕೆನಡಾದ ಎರಡು ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.