ಅಂಕಾರಾ, ಜೂ 19(DaijiworldNews/MS): ಇರಾನ್ ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಬೆಂಬಲಿಗ ಮತ್ತು ನ್ಯಾಯಾಂಗದ ಮುಖ್ಯ ನ್ನಾಯಮೂರ್ತಿಯಾಗಿದ್ದ ಇಬ್ರಾಹಿಂ ರೈಸಿ ಶನಿವಾರ ಇರಾನ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಇತಿಹಾಸದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದ್ದು, ಪ್ರಾಥಮಿಕ ಫಲಿತಾಂಶದ ಪ್ರಕಾರ ರೈಸಿ ಒಂದು ಕೋಟಿ 78 ಲಕ್ಷ ಮತಗಳನ್ನ ಗಳಿಸಿದ್ದಾರೆ. ದೇಶದ ಕೆಲವೊಂದಿಷ್ಟು ಜನ ಚುನಾವಣೆಯನ್ನ ಬಹಿಷ್ಕರಿಸಿದ್ದರು. ಇನ್ನು ರೈಸಿ ಅವರ ಪ್ರತಿಸ್ಪರ್ಧಿ ಮೊಹಸೆನ್ 33 ಲಕ್ಷ ಹಾಗೂ ಹೆಮ್ಮಟಿ 24 ಲಕ್ಷ ಮತಗಳನ್ನು ಪಡೆದಿದ್ದಾರೆ. ವಿದೇಶಾಂಗ ಸಚಿವ ಮೊಹಮ್ಮದ್ ಜಾವಾದ್ ಜರೀಫ್ , ರೈಸಿ ಅವರ ವಿಜಯವನ್ನು ಘೋಷಿಸಿದ್ದಾರೆ.
60 ವರ್ಷದ ಇಬ್ರಾಹಿಂ ರೈಸಿ ಅವರು ಆಗಸ್ಟ್ ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.