ಇಸ್ಲಮಾಬಾದ್, ಜೂ 21 (DaijiworldNews/PY): "ಮಹಿಳೆಯರು ಧರಿಸುವ ಉಡುಗೆಯಿಂದ ದೇಶದಲ್ಲಿ ದೌರ್ಜನ್ಯ ಪ್ರಕರಣ ಹೆಚ್ಚಾಗಲು ಕಾರಣ" ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಪುನರುಚ್ಚರಿಸಿದ್ದಾರೆ.
ಇಮ್ರಾನ್ ಖಾನ್ ಅವರ ಈ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿದ್ದು, ವಿಪಕ್ಷ ನಾಯಕರು ಹಾಗೂ ಪತ್ರಕರ್ತರು ಟೀಕಿಸುತ್ತಿದ್ದಾರೆ.
ಹೆಚ್ಬಿಒನ ಆಕ್ಸಿಯೋಸ್ ಸಂದರ್ಶನದಲ್ಲಿ ಇಮ್ರಾನ್ ಖಾನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, "ಮಹಿಳೆಯರು ತುಂಡುಡುಗೆ ಧರಿಸಿದರೆ, ಪುರುಷರ ಮೇಲೆ ಪರಿಣಾಮ ಬೀರುತ್ತದೆ. ಇದು ಕೇವಲ ಸಾಮಾನ್ಯ ಜ್ಞಾನ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ದಕ್ಷಿಣ ಏಷ್ಯಾ ನ್ಯಾಯಶಾಸ್ತ್ರಜ್ಞರ ಅಂತರರಾಷ್ಟ್ರೀಯ ಆಯೋಗದ ಕಾನೂನು ಸಲಹೆಗಾರ್ತಿ ಆಗಿರುವ ರೀಮಾ, "ಲೈಂಗಿಕ ದೌರ್ಜನ್ಯ ಪ್ರಕರಣಗಳಗೆ ಕಾರಣ ನೀಡುವಾಗ ಸಂತ್ರಸ್ತೆ ಅಥವಾ ಬಲಿಪಶುವನ್ನೇ ದೂಷಿಸುವ ಪಾಕ್ ಪ್ರಧಾನಿಯ ನಡೆ ನಿರಾಶೆಯುಂಟು ಮಾಡಿದೆ" ಎಂದು ಹೇಳಿದ್ದಾರೆ.