ಕಠ್ಮಂಡು, ಜೂ.22 (DaijiworldNews/HR): 'ಯೋಗ' ನೇಪಾಳದಲ್ಲಿ ಹುಟ್ಟಿಕೊಂಡಿದ್ದು ಹೊರತು ಭಾರತದಲ್ಲಲ್ಲ ಎಂದು ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಭಾಷಣ ಮಾಡಿದ ಅವರು, "ಯೋಗವು ನೇಪಾಳದಲ್ಲಿ ಹುಟ್ಟಿಕೊಂಡಿತು, ಭಾರತದಲ್ಲಿ ಅಲ್ಲ. ಯೋಗ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ, ಭಾರತದ ಸ್ವರೂಪ ಈಗಿನಂತಿರಲಿಲ್ಲ ಬದಲಾಗಿ ವಿವಿಧ ವಿಭಾಗಗಳಲ್ಲಿ ವಿಂಗಡನೆಯಾಗಿತ್ತು" ಎಂದರು.
ಇನ್ನು ಈ ಕುರಿತು ಭಾರತೀಯ ತಜ್ಞರು ಸತ್ಯವನ್ನು ಮರೆಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಕಳೆದ ಜುಲೈನಲ್ಲಿ ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆ ನೇಪಾಳದಲ್ಲಿದೆ ಮತ್ತು ಭಗವಾನ್ ರಾಮ ನೇಪಾಳಿ ಎಂದು ಒಲಿ ಹೇಳಿಕೊಂಡಿದ್ದರು.