ವಾಷಿಂಗ್ಟನ್, ಜೂ 26 (DaijiworldNews/MS): ಅಮೆರಿಕ ಮತ್ತು ವಿಶ್ವದಾದ್ಯಂತ ಕುತೂಹಲ ಹುಟ್ಟಿಸಿದ್ದ ಮಿನ್ನಿಯಾಪೋಲಿಸ್ನಲ್ಲಿ ಜಾರ್ಜ್ ಫ್ಲಾಯ್ಡ್ ಅವರ ವಿವಾದಾತ್ಮಕ ಸಾವಿನ ಪ್ರಕರಣದ ದೋಷಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ 22.5 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿದೆ.
ನಂಬಿಕೆ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡ ಕಾರಣಕ್ಕೆ ಈ ಜೈಲು ಶಿಕ್ಷೆ ನೀಡಲಾಗಿದೆ. ಮತ್ತು ಜಾರ್ಜ್ ಫ್ಲಾಯ್ಡ್ ಗೆ ತೋರಿಸಿದ ನಿರ್ದಿಷ್ಟ ಕ್ರೌರ್ಯವನ್ನು ಮನದಲ್ಲಿಟ್ಟುಕೊಂಡು ಶಿಕ್ಷೆ ಪ್ರಟಿಸಲಾಗಿದೆ ಎಂದು ಪೀಟರ್ ಕಾಹಿಲ್ ಹೇಳಿದರು.
ಕಳೆದ ವರ್ಷದ ಮೇ 25ರಂದು, ಫ್ಲಾಯ್ಡ್ ಸಾವಿಗೀಡಾಗುವ ಮೊದಲು ಅವರ ಕತ್ತನ್ನು ಬಿಳಿಯ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ 9 ನಿಮಿಷ ಮೊಣಕಾಲಿನಿಂದ ಅದುಮಿದ್ದರು. ಫ್ಲಾಯ್ಡ್ ಸಾವು ವ್ಯಾಪಕ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಜನಾಂಗೀಯ ಭೇದದ ವಿರುದ್ಧ ಆಕ್ರೋಶಕ್ಕೂ ಇದು ದಾರಿ ಮಾಡಿಕೊಟ್ಟಿತ್ತು. ಈ ಕೃತ್ಯವನ್ನು ತೃತೀಯ ಹಂತದ ಕೊಲೆ ಎಂದು ಪರಿಗಣಿಸಿದ್ದ ಪೀಠ, ಇದು ಅತ್ಯಂತ ಅಪಾಯಕಾರಿ ಮತ್ತು ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ ಎಂದು ಹೇಳಿತ್ತು