ಲಂಡನ್, ಜೂ.27 (DaijiworldNews/HR): ವಿಶ್ವಾದ್ಯಂತ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಸಾಮಾಜಿಕ ಅಂತರ ಸೇರಿ ಹಲವು ನಿಯಮಗಳನ್ನು ಮುಂದುವರೆಸುವಂತೆ ಎಲ್ಲೆಡೆ ಕರೆ ನೀಡಲಾಗುತ್ತಿದೆ. ಆದರೆ ಕೊರೊನಾ ನಿಮಯ ಉಲ್ಲಂಘಿಸಿ ಕಚೇರಿಯಲ್ಲಿನ ಸಿಬ್ಬಂದಿಗೆ ಮುತ್ತು ಕೊಟ್ಟ ಪ್ರಕರಣ ಸಂಬಂಧ ಬ್ರಿಟನ್ನ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿದ್ದ ವಿವಾಹಿತ ಆಪ್ತ ಸಿಬ್ಬಂದಿವೋರ್ವಳಿಗೆ ಮ್ಯಾಟ್ ಅವರು ಮುತ್ತು ನೀಡಿದ್ದರು ಎನ್ನಲಾಗಿದೆ.
ಇನ್ನು ಲಾಕ್ಡೌನ್ ನಿರ್ಬಂಧಗಳನ್ನು ಮೀರಿ ಮುತ್ತು ನೀಡಿದ್ದಕ್ಕೆ ಅಲ್ಲಿನ ಪ್ರತಿಪಕ್ಷಗಳು ಮ್ಯಾಟ್ ಹ್ಯಾನ್ಕಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಮ್ಯಾಟ್ ಅವರು ಮುತ್ತು ನೀಡಿದ್ದ ಫೋಟೋಗಳನ್ನು ಸುದ್ದಿ ಸಂಸ್ಥೆಯೊಂದು ಪ್ರಕಟಿಸಿದ್ದು, ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತಲ್ಲದೆ, ಕೃತ್ಯವನ್ನು ಹ್ಯಾನ್ಕಾಕ್ ಒಪ್ಪಿಕೊಂಡು ಆರೋಗ್ಯ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.