ಬಾಗ್ದಾದ್, ಜೂ 28 (DaijiworldNews/MS): ಇರಾಕ್ ಮತ್ತು ಸಿರಿಯಾ ನಡುವಿನ ಗಡಿಯ ಸಮೀಪ "ಇರಾನ್ ಬೆಂಬಲಿತ ಮಿಲಿಟಿಯಾ ಗುಂಪುಗಳು ಬಳಸುವ ಸೌಲಭ್ಯಗಳ" ಮೇಲೆ ಅಮೆರಿಕವು ಮಿಲಿಟರಿ ವೈಮಾನಿಕ ದಾಳಿ ನಡೆಸಿದ್ದು ಇದರ ಪರಿಣಾಮ ಐವರು ಇರಾನ್ ಬೆಂಬಲಿತ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವೈಮಾನಿಕ ದಾಳಿಯು ಮಿಲಿಟರಿ ನೆಲೆಗಳನ್ನು ಗುರಿಯಾಗಿ ಮಾಡಲಾಗಿತ್ತು ಎಂದು ವಾರ್ ಮಾನಿಟರ್ ವರದಿಯಲ್ಲಿ ತಿಳಿಸಿದೆ ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಸನಾ, ಘಟನೆಯಲ್ಲಿ ಒಂದು ಮಗು ಕೊಲ್ಲಲ್ಪಟ್ಟಿದೆ ಮತ್ತು ಕನಿಷ್ಠ ಮೂರು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಇರಾಕ್ ನಲ್ಲಿ ಯುಎಸ್ ಹಿತಾಸಕ್ತಿಗಳಿಗೆ ವಿರುದ್ಧವಾಗಿ " ಡ್ರೋನ್ಸ್ ಎಂದು ಕರೆಯಲ್ಪಡುವ ದಾಳಿಗಳನ್ನು ನಡೆಸಲು ಮಿಲಿಟಿಯರು ಸೌಲಭ್ಯಗಳನ್ನು ಬಳಸುತ್ತಿದ್ದಾರೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿರಿಯಾದ ಎರಡು ಸ್ಥಳಗಳಲ್ಲಿ ಮತ್ತು ಇರಾಕ್ನಲ್ಲಿ ಒಂದು ಸ್ಥಳದಲ್ಲಿ ಶಸ್ತ್ರಾಸ್ತ್ರ ಸಂಗ್ರಹಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಪೆಂಟಗನ್ ಪ್ರಕಟಣೆಯಲ್ಲಿ ತಿಳಿಸಿದೆ.