ವಾಷಿಂಗ್ಟನ್, ಜೂ 30 (DaijiworldNews/MS): ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ವಿರುದ್ಧದ ಹೋರಾಟದಲ್ಲಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಭಾರತಕ್ಕೆ ಸತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದು , ತಮ್ಮ ನಿರ್ಣಯದಲ್ಲಿ ಭಾರತಕ್ಕೆ ಕೋವಿಡ್ ಸಹಾಯವನ್ನು ತುರ್ತಾಗಿ ಸುಗಮಗೊಳಿಸುವಂತೆ ಬಿಡೆನ್ ಆಡಳಿತವನ್ನು ಒತ್ತಾಯಿಸಿದೆ.
ಈ ನಿರ್ಣಯದಲ್ಲಿ, "ಅಮೆರಿಕದಲ್ಲಿ ಕೋವಿಡ್ ಹರಡುವಿಕೆ ಉತ್ತುಂಗದಲ್ಲಿದ್ದಾಗ ಅಮೆರಿಕ ಸರ್ಕಾರದ ಮನವಿ ಮೇರೆಗೆ ಭಾರತ ಸರ್ಕಾರವು ಕೆಲವು ಕೋವಿಡ್ ಚಿಕಿತ್ಸಕಗಳ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸಿತ್ತು" ಎಂದು ನೆನಪಿಸಿದ್ದು ಅಮೆರಿಕದ ಅಧ್ಯಕ್ಷ ಬೈಡನ್ ನೇತೃತ್ವದ ಆಡಳಿತವನ್ನು ಒತ್ತಾಯಿಸುವ ನಿರ್ಣಯವನ್ನು ಅಮೆರಿಕದ ಪ್ರತಿನಿಧಿಗಳ ಸಭೆಯು ಒಮ್ಮತದ ಮೂಲಕ ಅಂಗೀಕರಿಸಿದೆ.
ಭಾರತದ ಔಷಧೀಯ ಉದ್ಯಮವು ಸಾಂಕ್ರಾಮಿಕ ರೋಗಕ್ಕೆ ಜಾಗತಿಕ ಪರಿಹಾರದ ಒಂದು ಪ್ರಮುಖ ಭಾಗವಾಗಿದೆ. ವಿಶೇಷವಾಗಿ, ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. 93 ದೇಶಗಳಿಗೆ 66.36 ಮಿಲಿಯನ್(6.63 ಕೋಟಿ) ಡೋಸ್ ಲಸಿಕೆಗಳನ್ನು ರಫ್ತು ಮಾಡಿದ್ದು, ಭಾರತವು ಕೋವಿಡ್ ಲಸಿಕೆಗಳನ್ನು ಉತ್ಪಾದಿಸುವ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ ಎಂದು ಉಲ್ಲೇಖಿಸಲಾಗಿದೆ.
.ಕೋವಿಡ್-19 ಹರಡುವುದನ್ನು ತಡೆಯಲು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಈ ನಿರ್ಣಯವು ಭಾರತದ ಜನರೊಂದಿಗೆ ನಿಂತಿದೆ’ ಎಂದು ಶೆರ್ಮನ್ ಹೇಳಿದರು. ವೈರಸ್ ಹರಡುತ್ತಿರುವ ಕಡೆಯಲ್ಲೆಲ್ಲ ಅದನ್ನು ತಗ್ಗಿಸಲು ಅಮೆರಿಕವು ವಿಶ್ವದಾದ್ಯಂತ ನಮ್ಮ ಮಿತ್ರ ರಾಷ್ಟ್ರಗಳ ಜೊತೆ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.
ಭಾರತದೊಂದಿಗೆ ನಮ್ಮ ನಿಕಟ ಸಂಬಂಧವಿದೆ. ಮೊದಲ ಅಲೆಯಲ್ಲಿ ಅಮೇರಿಕಾ ತತ್ತರಿಸಿದಾಗ ಭಾರತ ನಮ್ಮ ನೆರವಿಗೆ ಧಾವಿಸಿದೆ. ಭಾರತದಲ್ಲಿ ಎ ಪ್ರಕರಣದ ದರಗಳು ಇಳಿಮುಖವಾಗುತ್ತಿರುವುದರಿಂದ, ಎರಡನೇ ಅಲೆಯ ವಿರುದ್ಧದ ಯುದ್ಧವನ್ನು ಮುಗಿಸಲು ಮತ್ತುಕೊವೀಡ್ ವಿರುದ್ಧದ ಯುದ್ಧವನ್ನು ಒಟ್ಟಾರೆಯಾಗಿ ಗೆಲ್ಲಲು ನಾವು ಅವರಿಗೆ ಸಹಾಯ ಮಾಡಬೇಕು ಎಂದು ಚಬೊಟ್ ಹೇಳಿದರು.