ದ. ಆಪ್ರಿಕಾ, ಜೂ 30 (DaijiworldNews/MS): ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು, ಅಂದರೆ ಬಹು ಗಂಡಂದಿರನ್ನು ಹೊಂದಲು ಅವಕಾಶ ನೀಡುವ ಸರ್ಕಾರದ ಪ್ರಸ್ತಾಪವು ದಕ್ಷಿಣ ಆಫ್ರಿಕಾದದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ.
ಮಹಿಳೆಯರಿಗೆ ಬಹು ಪತಿಯರನ್ನು ಹೊಂದಲು ದಕ್ಷಿಣ ಆಫ್ರಿಕಾದಲ್ಲಿ ಮಾಡಿದ ಪ್ರಸ್ತಾಪವು ದೇಶದ ಸಮಾಜದ ಸಂಪ್ರದಾಯವಾದಿ ವಿಭಾಗದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ದೇಶದ ಗೃಹ ಇಲಾಖೆ ಬಹು ಗಂಡಂದಿರನ್ನು ಹೊಂದುವ ಪ್ರಸ್ತಾವನೆಯನ್ನು ಒಳಗೊಂಡಿರುವ ಗ್ರೀನ್ ಪೇಪರ್ ಏಪ್ರಿಲ್ ನಲ್ಲಿ ಸಿದ್ದಪಡಿಸಿದ್ದು ಮೇ ತಿಂಗಳಲ್ಲಿ ಸಾರ್ವಜನಿಕರ ಸಲಹೆಗಳಿಗಾಗಿ ತೆರೆಯಲಾಗಿದ್ದು ಜೂನ್ 30 ವರೆಗೆ ಸರ್ಕಾರ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.
ಕೆಲವು ಕಾರಣಗಳಿಗಾಗಿ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಲು ಪುರುಷನಿಗೆ ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಅವಕಾಶ ಇದೆ.
ದಕ್ಷಿಣ ಆಫ್ರಿಕಾದಲ್ಲಿ ಮದುವೆಗಳನ್ನು ನಿಯಂತ್ರಿಸುವ ಶಾಸನವು ದೇಶದ ಸಂವಿಧಾನದ ನಿಬಂಧನೆಗಳನ್ನು ಆಧರಿಸಿಲ್ಲ ಎಂದು ಸರ್ಕಾರದ ದಾಖಲೆ ಹೇಳಿದೆ. ಮದುವೆ ಶಾಸನವು ಸಮಾನತೆ, ತಾರತಮ್ಯರಹಿತ, ಮಾನವ ಘನತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ತತ್ವಗಳಿಗೆ ಅನುಗುಣವಾದ ಕಾನೂನತ್ಮಾಕ ವಿವಾಹಗಳಿಗೆ ಅನುವು ಮಾಡಿಕೊಡುತ್ತದೆ, ” ದಾಖಲೆ ವಿವರಿಸಿದೆ.