ನ್ಯೂಯಾರ್ಕ್, ಜು 01 (DaijiworldNews/PY): ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವ ಭಾರತಕ್ಕೆ ಅಮೇರಿಕಾದ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಆಫ್ ದಿ ಟ್ರೈ ಸ್ಟೇಟ್ ಏರಿಯಾ ಆಫ್ ನ್ಯೂಯಾರ್ಕ್, ನ್ಯೂಜೆರ್ಸಿ ಹಾಗೂ ಕನೆಕ್ಟಿಕಟ್ ಎನ್ನುವ ಸಂಸ್ಥೆ ಪಲ್ಸ್ ಆಕ್ಸಿಮೀಟರ್, ವೆಂಟಿಲೇಟರ್ ಹಾಗೂ ವೈದ್ಯಕೀಯ ಪರಿಕರಗಳನ್ನು ರವಾನಿಸಿದೆ.
"300 ವೆಂಟಿಲೇಟರ್ಗಳು, 3,000 ವೆಂಟಿಲೇಟರ್ ಸರ್ಕ್ಯೂಟ್ಗಳು, 3,10,176 ಪಲ್ಸ್ ಆಕ್ಸಿಮೀಟರ್ಗಳು, ಸರ್ಕೀಟ್ಗಳು, ಫಿಲ್ಟರ್ಗಳು, ಫ್ಲೋ ಸೆನ್ಸರ್ಸ್ಗಳು ಸೇರಿ 3,000 ವೈದ್ಯಕೀಯ ಸಾಧನಗಳು, 100 ಪೋರ್ಟಬಲ್ ವೆಂಟಿಲೇಟರ್ಗಳನ್ನು ಕಳುಹಿಸಲಾಗಿದೆ" ಎಂದು ಸಂಸ್ಥೆ ಮಾಹಿತಿ ನೀಡಿದೆ.
"ಭಾರತಕ್ಕೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಕಳುಹಿಸಿದ ಎಫ್ಐಎ ಕಾರ್ಯ ಶ್ಲಾಘನೀಯ" ಎಂದು ನ್ಯೂಯಾರ್ಕ್ನಲ್ಲಿರುವ ಭಾರತದ ಡೆಪ್ಯುಟಿ ಕಾನ್ಸುಲ್ ಜನರಲ್ ಶತ್ರುಘ್ನ ಸಿನ್ಹ ತಿಳಿಸಿದ್ದಾರೆ.