ಜೆರುಸಲೇಮ್, ಜು 02 (DaijiworldNews/PY): "ಇಸ್ರೇಲ್ನ ಗಡಿಭಾಗದಲ್ಲಿ ಕೃಷಿಕರು ನೆಲೆಸಿರುವ ಕೆಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹಮಾಸ್ ಉಗ್ರ ಸಂಘಟನೆಯು ದಾಳಿ ನಡೆಸಿದ್ದು, ಈ ದಾಳಿಗೆ ಪ್ರತಿ ದಾಳಿಯಾಗಿ ಯುದ್ಧವಿಮಾನಗಳಿಂದ ಗಾಜಾಪಟ್ಟಿಯ ಮೇಲೆ ದಾಳಿ ನಡೆಸಲಾಗಿದೆ" ಎಂದು ಶುಕ್ರವಾರ ಇಸ್ರೇಲ್ ಮಿಲಿಟರಿ ತಿಳಿಸಿದೆ.
"ಹಮಾಸ್ ಸಂಘಟನೆಗಳು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಈ ವಾಯುದಾಳಿ ನಡೆಸಲಾಗಿದೆ" ಎಂದಿದೆ.
"ಬಾಂಬ್ಗಳನ್ನು ತುಂಬಿದ್ದ ಬಲೂನ್ಗಳನ್ನು ಬಳಸಿ ಹಮಾಸ್ ಬೆಂಬಲಿತ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಘಟನೆಯ ಪರಿಣಾಮ ಯಾವುದೇ ಸಾವಿ-ದೋವುಗಳು ವರದಿಯಾಗಿಲ್ಲ. ಈ ಬಗ್ಗೆ ವಿವರಗಳು ಲಭ್ಯವಿಲ್ಲ" ಎಂದು ಮಿಲಿಟರಿ ತಿಳಿಸಿದೆ.
ಹಮಾಸ್ ಉಗ್ರರು ಹಾಗೂ ಇಸ್ರೇಲ್ ಮಿಲಿಟರಿ ನಡುವೆ ಮೇ ತಿಂಗಳಿನಲ್ಲಿ 11 ದಿನಗಳ ಕಾಲ ಸಂಘರ್ಷ ನಡೆದಿದ್ದು, ನಂತರ ಕದನ ವಿರಾಮ ಘೋಷಣೆ ಮಾಡಲಾಗಿತ್ತು.
ಇದರ ಬಳಿಕ ಇದೀಗ ಇಸ್ರೇಲ್ ಮಿಲಿಟರಿ ಗಾಜಾ ಪಟ್ಟಿಯ ಮೇಲೆ ನಡೆಸಿದ ಮೂರನೇ ದಾಳಿ ಇದಾಗಿದೆ ಎಂದು ಮೂಲಗಳು ಹೇಳಿವೆ.