ಟೋಕಿಯೊ, ಜು 03 (DaijiworldNews/PY): ಟೋಕಿಯೋದಲ್ಲಿ ಮಣ್ಣು ಕುಸಿದ ಪರಿಣಾಮ ಹಲವು ಮನೆಗಳು ಕುಸಿದಿದ್ದು, 19 ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.
"ಪಶ್ಚಿಮ ಟೋಕಿಯೊ ಅತಾಮಿ ನಗರದಲ್ಲಿ ಪ್ರಬಲ ಭೂಕುಸಿತದ ಪರಿಣಾಮ ಈ ಘಟನೆ ಸಂಭವಿಸಿದೆ. ಶನಿವಾರ ಮುಂಜಾನೆ ಈ ಭೂಕುಸಿತ ಸಂಭವಿಸಿದ್ದು, 19 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯ ನಡೆಯುತ್ತಿದೆ" ಎಂದು ಪರಿಹಾರ ಕಾರ್ಯ ತಂಡ ಹೇಳಿದೆ.
"ಜಪಾನ್ನಲ್ಲಿ ಕಳೆದ ಹಲವಾರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದ ಉಂಟಾದ ಭೂ ಸವಕಳಿಯ ಪರಿಣಾಮ ಈ ಘಟನೆ ಸಂಭವಿಸಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.