ಬಾಗ್ದಾದ್, ಜು.08 (DaijiworldNews/HR): ಇರಾಕ್ನಲ್ಲಿ ಅಮೇರಿಕಾ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ಮೂರು ರಾಕೆಟ್ ದಾಳಿ ನಡೆದಿದೆ ಎಂದು ಇರಾಕ್ ಸೇನೆ ತಿಳಿಸಿರುವುದಾಗಿ ವರದಿಯಾಗಿದೆ.
ಸರಣಿ ರಾಕೆಟ್ ಹಾಗೂ ಡ್ರೋನ್ ದಾಳಿಗಳನ್ನು ಇರಾಕ್ ಹಾಗೂ ಸಿರಿಯಾದಲ್ಲಿ ಅಮೇರಿಕಾ ನೆಲೆಯನ್ನು ಗುರಿಯಾಗಿಸಿಕೊಂಡು ನಡೆಯುತ್ತಿದೆ ಎನ್ನಲಾಗಿದೆ.
ಇನ್ನು ಅಮೇರಿಕಾ ಸೇನಾ ನೆಲೆಯ ಮೇಲಿನ ದಾಳಿಯ ಹಿಂದಿನ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ ಇರಾನ್ ಪ್ರಾಯೋಜಿತ ಭಯೋತ್ಪಾದಕರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಅಮೇರಿಕಾ ರಾಯಭಾರ ಕಚೇರಿ ಮೇಲೆ ರಾಕೆಟ್ ಬಿದ್ದಿಲ್ಲ. ಆದರೆ ಗರಿಷ್ಠ ಭದ್ರತೆಯ ಸುರಕ್ಷ ವಲಯದಲ್ಲಿನ ಮೂರು ಪ್ರದೇಶಗಳನ್ನು ಗುರಿಯಾಗಿಸಲಾಗಿದೆ.
ಇನ್ನು ಕಳೆದ ತಿಂಗಳು ಇರಾಕ್-ಸಿರಿಯಾ ಗಡಿಯಲ್ಲಿ ಅಮೇರಿಕಾ ಸೈನ್ಯವು ನಡೆಸಿದ ದಾಳಿಯಲ್ಲಿ ನಾಲ್ವರನ್ನು ಹತ್ಯೆಗೈಯಲಾಗಿತ್ತು.