ಪ್ಯಾರಿಸ್, ಜು.08 (DaijiworldNews/HR): ಬ್ರಿಟನ್ನ ಕೈರ್ನ್ ಎನರ್ಜಿ ಪಿಲ್ಸಿಗೆ 1.7 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ವಸೂಲಿ ಮಾಡುವುದಕ್ಕಾಗಿ ಫ್ರಾನ್ಸ್ನಲ್ಲಿರುವ ಸುಮಾರು 20 ಭಾರತೀಯ ಸರ್ಕಾರಿ ಆಸ್ತಿಯನ್ನು ಮುಟ್ಟುಗೋಲು ಹಾಕಲು ಫ್ರಾನ್ಸ್ನ ನ್ಯಾಯಾಲಯವೊಂದು ಆದೇಶಿಸಿದೆ ಎಂದು ತಿಳಿದು ಬಂದಿದೆ.
ಭಾರತೀಯ ಸರ್ಕಾರಿ ಆಸ್ತಿಯನ್ನು ಜೂನ್ 11 ರಂದು ಫ್ರಾನ್ಸ್ ಕೋರ್ಟ್ ಕೈರ್ನ್ ಎನರ್ಜಿ ಪಿಲ್ಸಿಗೆ ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದೆ ಎನ್ನಲಾಗಿದೆ.
ಕೈರ್ನ್ ಎನರ್ಜಿ ಪಿಲ್ಸಿಗೆ 1.2 ಮಿಲಿಯನ್ ಡಾಲರ್ಗೂ ಅಧಿಕ ಬಡ್ಡಿ ಮತ್ತು ದಂಡ ಪಾವತಿಸುವಂತೆ ಡಿಸೆಂಬರ್ನಲ್ಲಿ ಭಾರತ ಸರ್ಕಾರಕ್ಕೆ ಆದೇಶಿಸಿದ್ದು, ಭಾರತ ಸರ್ಕಾರ ಈ ಆದೇಶವನ್ನು ಒಪ್ಪಿರಲಿಲ್ಲ. ಬಳಿಕ ಕೈರ್ನ್ ಎನರ್ಜಿ ಭಾರತ ಸರ್ಕಾರದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಬಾಕಿ ವಸೂಲಿ ಮಾಡಲು ಅವಕಾಶ ನೀಡುವಂತೆ ವಿದೇಶದಲ್ಲಿ ಹಲವಾರು ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಇನ್ನು ಕೈರ್ನ್ ಎನರ್ಜಿಯು ಪೂರ್ವಾವಲೋಕನದಿಂದ ಸರ್ಕಾರ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಂಡ ಏಕೈಕ ಕಂಪನಿಯಾಗಿದೆ.