ದುಬೈ, ಜು 08 (DaijiworldNews/MS): ಅಬುಧಾಬಿಯಲ್ಲಿ ನಡೆದ ಅಪಘಾತದಲ್ಲಿ ಕೇರಳ ಕಣ್ಣೂರಿನ ಮೂಲದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಗುರುವಾರ ಮಾಧ್ಯಮ ವರದಿ ತಿಳಿಸಿದೆ.
ಮೃತಪಟ್ಟವನನ್ನು ಕಣ್ಣೂರು ಜಿಲ್ಲೆಯ ತಾಲಿಪರಂಬಾ ಬಳಿಯ ನ್ಯೂ ಸ್ಟ್ರೀಟ್ನ ಎಟಿಸಾಲಾಟ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಅಧಿಕಾರಿ ಅಜ್ಮಲ್ ರಶೀದಿ ಮತ್ತು ನಬಿಲಾ ಅವರ ಪುತ್ರ ಇಬಾದ್ ಅಜ್ಮಲ್ (19) ಎಂದು ಗುರುತಿಸಲಾಗಿದೆ. ಇವರು ಕಳೆದ ತಿಂಗಳಷ್ಟೇ ಅಜ್ಮಲ್ ಕೇರಳದ ಕಣ್ಣೂರಿಗೆ ಬಂದು ಹೋಗಿದ್ದರು.
ಅಬುಧಾಬಿಯ ಯಾಸ್ ದ್ವೀಪದಲ್ಲಿ ಬುಧವಾರ ೮ ಗಂಟೆಗೆ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ, ಅಜ್ಮಲ್ ಒಬ್ಬರೇ ಕಾರು ಚಲಾವಣೆ ಮಾಡುತ್ತಿದ್ದರು ಎಂದು ಖಲಿಜಾ ಟೈಮ್ಸ್ ವರದಿ ಮಾಡಿದೆ.
ಅಬುಧಾಬಿ ಇಂಡಿಯನ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಇಬಾದ್, ಬ್ರಿಟನ್ನ ಸೌತ್ ವೇಲ್ಸ್ ಕಾರ್ಡಿಫ್ ಕ್ಯಾಂಪಸ್ನಲ್ಲಿ 'ವೈಮಾನಿಕ ಎಂಜಿನಿಯರಿಂಗ್ ಮತ್ತು ನಿರ್ವಹಣಾ ವ್ಯವಸ್ಥೆ' ವಿಷಯದಲ್ಲಿ ಪದವಿ ಪಡೆದಿದ್ದರು.
ಪೊಲೀಸರು ಅಪಘಾತದ ಬಳಿಕ ತಕ್ಷಣವೇ ಅಬುಧಾಬಿಯ ಶೇಖ್ ಶಕ್ಬೂತ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.