ಢಾಕಾ, ಜು.09 (DaijiworldNews/HR): ಆರು ಅಂತಸ್ತಿನ ಜ್ಯೂಸ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ ಸಂಭಂವಿಸಿದ್ದು, ಕನಿಷ್ಠ 40 ಜನರು ಮೃತಪಟ್ಟಿದ್ದು, 30ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದಿದೆ.
ನಾರ್ಯಾನ್ ಗಂಜ್ನ ರುಪ್ಗಂಜ್ನಲ್ಲಿರುವ ಶೆಜಾನ್ ಜ್ಯೂಸ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು ಇರುವ ಕಾರಣ ಬೆಂಕಿಯು ಕಟ್ಟಡದ ನೆಲಮಹಡಿಯಿಂದ ಹುಟ್ಟಿ ತ್ವರಿತವಾಗಿ ಹರಡಿತು ಎಂದು ಶಂಕಿಸಲಾಗಿದೆ.
ಇನ್ನು ಈ ದುರಂತದಲ್ಲಿ 40 ಜನ ಸಾವನ್ನಪ್ಪಿದ್ದು, ಮತ್ತು 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿನಾಶಕಾರಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಲವಾರು ಕಾರ್ಮಿಕರು ಕಟ್ಟಡದಿಂದ ಜಿಗಿದಿದ್ದಾರೆ ಎಂದು ಹೇಳಲಾಗಿದ್ದು, ಕಾರ್ಖಾನೆ ಕಟ್ಟಡದಲ್ಲಿ 18 ಅಗ್ನಿಶಾಮಕ ಘಟಕಗಳು ಬೆಂಕಿಯನ್ನ ನಂದಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.