ಟೆಹ್ರಾನ್, ಜು 10 (DaijiworldNews/PY): ಸುಳ್ಳು ಸಂದೇಶಗಳನ್ನು ರವಾನಿಸಿ ಇರಾನ್ನಲ್ಲಿ ರೈಲು ಸೇವೆಯನ್ನು ಹ್ಯಾಕರ್ಗಳು ಅಸ್ತವ್ಯಸ್ತಗೊಳಿಸಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸೈಬರ್ ಹ್ಯಾಕರ್ಗಳು ರೈಲ್ವೆ ಸಂಚಾರ ವ್ಯವಸ್ಥೆ ದಾಳಿ ನಡೆಸಿದ್ದು, ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳ ಫಲಕಗಳಲ್ಲಿ ರೈಲು ಸಂಚಾರ ರದ್ದಾಗಿದೆ ಎನ್ನುವ ಸುಳ್ಳು ಮಾಹಿತಿಯನ್ನು ಪ್ರಕಟಿಸಿದ್ದಾರೆ. ಈ ಕಾರಣದಿಂದ ಶುಕ್ರವಾರ ದೇಶಾದ್ಯಂತ ರೈಲು ಸೇವೆ ಅಸ್ತವ್ಯಸ್ತಗೊಂಡಿತ್ತು
ದೇಶದ ಪರಮೋಚ್ಛ ನಾಯಕ ಅಯತೊಲ್ಲಾಹ್ ಅಲಿ ಖಮೆನಿಯಾ ಅವರ ದೂರವಾಣಿ ಸಂಖ್ಯೆಯನ್ನು ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಸಂಪರ್ಕಿಸುವಂತೆ ಹ್ಯಾಕರ್ಗಳು ನೀಡಿದ್ದರು.
ಈ ಸೈಬರ್ ದಾಳಿಯ ಪರಿಣಾಮ ರೈಲ್ವೆ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು.
ಸೈಬರ್ ದಾಳಿಯ ಜವಾಬ್ದಾರಿಯನ್ನು ಯಾವ ಸಂಘಟನೆಗಳು ಹೊತ್ತುಕೊಂಡಿಲ್ಲ. ಘಟನೆಯ ಪರಿಣಾಮ ಶುಕ್ರವಾರ ಬೆಳಗ್ಗೆ ಇರಾನ್ ದೇಶಾದ್ಯಂತ ರೈಲು ಸಂಚಾರದ ಮೇಲೆ ನಿಗಾ ಇಡುವ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ವ್ಯವಸ್ಥೆಯು ಸಂಪರ್ಕ ಕಡೆದುಕೊಂಡಿತ್ತು. ಇದು ಸೈಬರ್ ದಾಳಿಕೋರರ ಕೆಲಸವೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.