ಜಾರ್ಜಿಯಾ, ಜು.10 (DaijiworldNews/HR): 17ನೇ ಶತಮಾನದ ಜಾರ್ಜಿಯಾ ರಾಣಿ, ಸೈಂಟ್ ಕೆಟೆವನ್ ಅವರ ಪವಿತ್ರ ಪಳೆಯುಳಿಕೆಯನ್ನು ಭಾರತವು ಜಾರ್ಜಿಯಾಕ್ಕೆ ಹಸ್ತಾಂತರಿಸಿದೆ.
ಗೋವಾದಲ್ಲಿ 16 ವರ್ಷಗಳ ಹಿಂದೆ ಪತ್ತೆಯಾಗಿರುವ ಪಳೆಯುಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಸ್ತಾಂತರಿಸಿದ್ದು, ಜೈಶಂಕರ್ ಅವರು ಪೂರ್ವ ಯುರೋಪ್ ಹಾಗೂ ಪಶ್ಚಿಮ ಏಷ್ಯಾದ ಸಂಧಿಸ್ಥಾನದಲ್ಲಿರುವ ಜಾರ್ಜಿಯಾಕ್ಕೆ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ.
ಇನ್ನು ಜಾರ್ಜಿಯಾದ ಪ್ರಧಾನಿ ಇರಾಕ್ಲಿ ಗರಿಬಾಶ್ವಿಲಿ ಹಾಗೂ ಕ್ಯಾಥೊಲಿಕ್ ಧರ್ಮಗುರು ಬೀಟಿಟ್ಯೂಡ್ ಇಲಿಯಾ II ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪೂಜಾರ್ಹವೆಂದು ರಕ್ಷಿಸಲ್ಪಟ್ಟ ಪವಿತ್ರ ಪಳೆಯುಳಿಕೆ ಹಸ್ತಾಂತರಿಸಿದರು.