ಇಸ್ರೇಲ್, ಜು 11 (DaijiworldNews/PY): ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದಿಂದ ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಾಗೂ ಅವರ ಕುಟುಂಬ ನಿರ್ಗಮಿಸಿದೆ ಎಂದು ವರದಿಯಾಗಿದೆ.
ಈ ವಾರದ ಆರಂಭದಲ್ಲಿ ಪ್ರಧಾನಿ ನಿವಾಸದ ಎದರು ಟ್ರಕ್ ಸಂಚರಿಸುತ್ತಿರುವುದು ಕಂಡುಬಂದಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಶುಕ್ರವಾರದಂದು ಹಲವಾರು ವಾಹನಗಳು ನಿರ್ಗಮಿಸುತ್ತಿರುವುದು ಕಂಡುಬಂದಿದೆ. ಅದು ವಿರೋಧ ಪಕ್ಷದ ನಾಯಕ ನೇತನ್ಯಾಹು ಅವರಿಗೆ ಸೇರಿದ ವಾಹನಗಳಾಗಿವೆ ಎಂದು ಕೆಲ ಮಾಧ್ಯಮಗಳು ಪ್ರಕಟಿಸಿವೆ.
ಶನಿವಾರ ತಡರಾತ್ರಿ ನೇತನ್ಯಾಹು ಅವರು ಜೆರುಸಲೆಂನಿಂದ ತೆರಳಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳು ಈ ವಿಚಾರದ ಬಗ್ಗೆ ಖಚಿತಪಡಿಸಿಲ್ಲ.
ಜೂನ್ 13ರಂದು ಬಲಪಂಥೀಯ ನಾಯಕ ನಫ್ತಾಲಿ ಬೆನ್ನೆಟ್ ಅವರು ಇಸ್ರೇಲ್ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಈ ಮೂಲಕ ನೇತನ್ಯಾಹು ಅವರ 12 ವರ್ಷಗಳ ಆಡಳಿತ ಕೊನೆಗೂ ಅಂತ್ಯಗೊಂಡಿತ್ತು.