ಸಿಂಗಾಪುರ, ಜು 12 (DaijiworldNews/PY): ಕೊರೊನಾ ಪರೀಕ್ಷಾ ವರದಿ ಬರುವ ತನಕ ಆಸ್ಪತ್ರೆಯಲ್ಲಿ ಕಾಯಲು ಹೇಳಿದ್ದರೂ ಸಿಂಗಾಪುರದಿಂದ ಹೊರಹೋಗಲು ಯತ್ನಿಸಿದ ಕಾರಣ 26 ವರ್ಷದ ಭಾರತೀಯ ಪ್ರಜೆಗೆ ಒಂಭತ್ತು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಭಾರತೀಯ ಪ್ರಜೆ ಬಾಲಚಂದ್ರನ್ ಪಾರ್ಥಿಬನ್ ಸಿಂಗಾಪರದಿಂದ ಹೊರಹೋಗಲು ಯತ್ನಿಸಿದ್ದು, ಇವರನ್ನು ಚಾಂಗಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಇವರನ್ನು ಪೊಲೀಸರು ಸಿಂಗಾಪುರ ಜನರಲ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಈ ವೇಳೆ ಅವರ ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ.
ಬಾಲಚಂದ್ರನ್ ಅವರು ಸಾರ್ವಜನಿಕ ಸಾರಿಗೆಯ ಮೂಲಕ ಭಾರತಕ್ಕೆ ಟಿಕೆಟ್ ಖರೀದಿ ಮಾಡಲು ವಿಫಲರಾಗಿದ್ದು, ಹಾಗಾಗಿ ಚಾಂಗಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಸುಳ್ಳು ಹೇಳುತ್ತಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಅಲ್ಲದೇ, ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿ ಭಾರತಕ್ಕೆ ವಾಪಾಸ್ಸಾಗಲು ಮತ್ತೆ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ ಎಂದು ವರದಿ ವಿವರಿಸಿದೆ.
ಅನುಮತಿ ಇಲ್ಲದೇ ದೇಶದಿಂದ ಹೊರಹೋಗಲು ಯತ್ನಿಸಿದ್ದಕ್ಕೆ ಹಾಗೂ ಕೊರೊನಾದ ಅಪಾಯಕ್ಕೆ ಇತರರನ್ನು ಒಡ್ಡಿದ ಆರೋಪದ ಕುರಿತು ಬಾಲಚಂದ್ರನ್ ಅವರು ಮೇ ತಿಂಗಳಿನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಅವರನ್ನು ಮನೋವೈದ್ಯಕೀಯ ಪರೀಕ್ಷೆಗಾಗಿ ಮಾನಸಿಕ ಸಂಸ್ಥೆಯಲ್ಲಿ ರಿಮಾಂಡ್ ಮಾಡಲು ಆತನ ಪರ ವಕೀಲ ಕೋರೈ ವಾಂಗ್ ಮನವಿ ಮಾಡಿದ್ದಾರೆ.
"ಐಎಂಹೆಚ್ನ ನಾಲ್ಕು ವಾರಗಳ ಪರೀಕ್ಷೆಯಲ್ಲಿ ಬಾಲಚಂದ್ರನ್ ಅವರು ಕಳೆದ ವರ್ಷ ಮೇ ತಿಂಗಳಿನಲ್ಲಿ ಮಾಡಿದ ಅಪರಾಧಗಳ ಸಂದರ್ಭ, ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಈ ರೀತಿಯ ಕೃತ್ಯಕ್ಕೆ ಸಣ್ಣ ಮಾನಸಿಕ ಅಸ್ವಸ್ಥತೆಯ ಸ್ಥಿತಿ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಯಾವುದು ಸರಿ ಅಥವಾ ಯಾವುದು ತಪ್ಪು ಎಂದಿ ತೀರ್ಮಾನಿಸಲು ಸಾಧ್ಯವಾಗದೇ ಇರುವಂತಹ ಮಾನಸಿಕ ಸಾಮರ್ಥ್ಯವನ್ನು ಆತ ಹೊಂದಿಲ್ಲ. ಆತನಿಗೆ ಸರಿ ಯಾವುದು, ತಪ್ಪು ಯಾವುದು ಎಂದು ಅರ್ಥ ಮಾಡಿಕೊಳ್ಳುವ ಮಾನಸಿಕ ಸಾಮರ್ಥ್ಯ ಇದೆ" ಎಂದು ಡಾ. ಸ್ಟೀಫನ್ ಫಾಂಗ್ ತಿಳಿಸಿದ್ದಾರೆ.
"ಬಾಲಚಂದ್ರನ್ ಅವರು ಐಎಂಹೆಚ್ನಲ್ಲಿದ್ದ ಸಂದರ್ಭ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಮಾತನಾಡಿದ್ದಾರೆ. ಅವರನ್ನು ನಿಯಂತ್ರಿಸವುದೇ ಬಲು ಕಷ್ಟವಾಗಿದೆ. ಸದ್ಯ ಔಷಧಿ ನೀಡಲಾಗುತ್ತಿದೆ. ಅವರ ಪರಿಸ್ಥಿತಿ ಉತ್ತಮವಾಗಿದೆ" ಎಂದು ಹೇಳಿದ್ದಾರೆ.
"ಅವರು ಸ್ಕಿಜೋಫ್ರೇನಿಫಾರ್ಮ್ ಸೈಕೋಸಿಸ್ನಿಂದ ಬಳಲುವಂತಾಗಿದೆ. ಒತ್ತಡದಿಂದ ಇದು ಉಂಟಾಗುತ್ತದೆ. ತನ್ನ ಕುಟುಂಬದ ಬಗ್ಗೆ ಆತ ಹೆಚ್ಚಿನ ಕಾಳಜಿ ಹೊಂದಿದ್ದಾನೆ" ಎಂದು ಫಾಂಗ್ ವೈದ್ಯಕೀಯ ವರದಿ ಮೂಲಕ ತಿಳಿಸಿದ್ದಾರೆ.
ಬಾಲಚಂದ್ರನ್ ಅವರಿಗೆ ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ನಾರ್ಮನ್ ಯೂ ಹತ್ತು ತಿಂಗಳ ಜೈಲು ವಿಧಿಸಿದ್ದು, ಈ ವೇಳೆ ವಾಂಗ್ ಅವರು ಆರೂವರೆ ತಿಂಗಳ ಜೈಲು ಶಿಕ್ಷೆ ಇಳಿಕೆಗೆ ಕೋರಿದ್ದಾರೆ.
"ಕೊರೊನಾ ನಿಯಮಗಳ ಉಲ್ಲಂಘನೆ ಮಾಡಿದ ಆರೋಪಕ್ಕೆ ಬಾಲಚಂದ್ರನ್ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಅಥವಾ 10,000 ಎಸ್ಜಿಡಿ ವರೆಗೆ ದಂಡ ಪಾವತಿಸಬೇಕು" ಎಂದು ನ್ಯಾಯಾಲಯ ಹೇಳಿದೆ.