ಜರ್ಮನಿ, ಜು 15 (DaijiworldNews/PY): ಪಶ್ಚಿಮ ಜರ್ಮನಿಯಲ್ಲಿ ನಿರಂತರ ಮಳೆಯ ಪರಿಣಾಮ ಪ್ರವಾಹ ಉಂಟಾಗಿ ಸುಮಾರು 30 ಮಂದಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
"ಕಳೆದ ರಾತ್ರಿ ರೈನ್ಲ್ಯಾಂಡ್-ಪ್ಯಾಲಟಿನೇಟ್ನ ಷುಲ್ಡ್ ಪಟ್ಟಣದಲ್ಲಿ ಒಟ್ಟು ಆರು ಮನೆಗಳು ಕುಸಿದಿವೆ" ಎಂದು ಪ್ರಾದೇಶಿಕ ಸಾರ್ವಜನಿಕ ಪ್ರಸಾರ ನಿಗಮ ಎಸ್ಡಬ್ಲ್ಯುಆರ್ ಹೇಳಿದೆ.
"ಆ ಪ್ರದೇಶದಲ್ಲಿ ಇನ್ನೂ 25 ಮನೆಗಳು ಅಸ್ಥಿರ ಸ್ಥಿತಿಯಲ್ಲಿವೆ ಹಾಗೂ ಕುಸಿತದ ಅಪಾಯದಲ್ಲಿದೆ. ಹಾನಿಯ ವ್ಯಾಪ್ತಿ ಹಾಗೂ ಇನ್ನೂ ಕಾಣೆಯಾದವರ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ರಾಜ್ಯದ ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಜನರು ಪ್ರವಾಹದ ನೀರಿಗೆ ಕೊಚ್ಚಿ ಹೋಗಿದ್ದು, ವಾಯು ಪಾರುಗಾಣಿಕಕ್ಕಾಗಿ ಕಾಯುತ್ತಿದೆ" ಎಂದಿದೆ.
ಜರ್ಮನ್ಮಿಲಟಿ ಕೂಡಾ ರಕ್ಷಣೆಯಲ್ಲಿ ಭಾಗಿಯಾಗಿದೆ.