ವಾಷಿಂಗ್ಟನ್, ಜು.17 (DaijiworldNews/HR): ಕೊರೊನಾ ಸೋಂಕು ಹಾಗೂ ಲಸಿಕೆ ಕುರಿತು ಸಾಮಾಜಿಕ ಮಾಧ್ಯಮಗಳು ಸುಳ್ಳು ಸುದ್ದಿ ಹರಡುವ ಮೂಲಕ ಜನರನ್ನು ಕೊಲ್ಲುತ್ತಿವೆ ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಮಾಧ್ಯಮದ ವಿರುದ್ಧ ಕಿಡಿ ಕಾರಿದ್ದಾರೆ.
ಕೊರೊನಾ ಸೋಂಕು ಮತ್ತು ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಸಾಮಾಜಿಕ ಜಾಲತಾಣಗಳನ್ನು ಬಿಡೆನ್ ಟೀಕಿಸಿದ್ದಾರೆ.
ಇನ್ನು "ಲಸಿಕೆ ಪಡೆಯದವರಲ್ಲಿ ಮಾತ್ರ ಕೊರೊನಾ ಸೋಂಕು ಇರುವುದಾಗಿ ಹೇಳುವ ಮೂಲಕ ಸಾಮಾಜಿಕ ಮಾಧ್ಯಮಗಳು ಜನರನ್ನು ಕೊಲ್ಲುತ್ತಿವೆ ಎಂದು ಆರೋಪಿಸಿರುವ ಅವರು, ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡುವಿಕೆ ನಿಲ್ಲಿಸುವಲ್ಲಿ ಫೇಸ್ಬುಕ್ ಸೂಕ್ತ ಕ್ರಮ ಕೈಗೊಂಡಿಲ್ಲ" ಎಂದು ಹೇಳಿದ್ದಾರೆ.