ನವದೆಹಲಿ, ಜು.17 (DaijiworldNews/HR): ಪಾಕಿಸ್ತಾನ ಮತ್ತು ಭಾರತದ ನಡುವೆ ಮಾತುಕತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ನ ಸಿದ್ಧಾಂತಗಳೇ ಅಡ್ಡಿಯಾಗಿದೆ ಎಂದು ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದು, ಇದಕ್ಕೆ ಶಿವಸೇನೆ ಕಿಡಿಕಾರಿದೆ.
ಇಮ್ರಾನ್ ಖಾನ್ ಅವರು ಉಜ್ಬೇಕಿಸ್ತಾನದಲ್ಲಿನ ಸೆಂಟ್ರಕ್-ದಕ್ಷಿಣ ಏಷ್ಯಾ ಸಮ್ಮೇಳನದಲ್ಲಿ ಭಾಗಿಯಾಗಿದ್ದ ವೇಲೆ ಮಾತನಾಡಿ, "ಪಾಕಿಸ್ತಾನ ಮತ್ತು ಭಾರತದ ನಡುವೆ ಸೌಹಾರ್ದಯುತ ಮಾತುಕತೆಗೆ ಆರ್ಎಸ್ಎಸ್ ಸಿದ್ಧಾಂತಗಳು ಅಡ್ಡಿಯಾಗಿದೆ" ಎಂದಿದ್ದರು.
ಇಮ್ರಾನ್ ಖಾನ್ ಅವರ ಈ ಹೇಳಿಕೆ ಶಿವಸೇನೆ ನಾಯಕ ಸಂಜಯ್ ರಾವತ್ ಕಿಡಿಕಾರಿದ್ದು, "ಆಫ್ಘಾನಿಸ್ತಾನದಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ಪರಿಸ್ಥಿತಿಗೆ ಪಾಕಿಸ್ತಾನವೇ ಕಾರಣ" ಎಂದು ಹೇಳಿದ್ದಾರೆ.
ಇನ್ನು "ಪಾಕಿಸ್ತಾನ ತಾಲಿಬಾನ್ನ ಸೃಷ್ಟಿಕರ್ತ. ವಿಶ್ವದ ತಲೆದೋರಿರುವ ಭಯೋತ್ಪಾದನೆಗೆ ಪಾಕಿಸ್ತಾನವೇ ಕಾರಣ" ಎಂದಿದ್ದಾರೆ.