ಬಾಗ್ದಾದ್ , ಜು 20 (DaijiworldNews/MS): ಇರಾಕ್ ನ ರಾಜಧಾನಿ ಬಾಗ್ದಾದ್ ಉಪನಗರ ಸದರ್ ಮಾರುಕಟ್ಟೆಯ ಗುರಿಯಾಗಿಸಿಕೊಂಡು ಸೋಮವಾರ ಬಾಂಬ್ ದಾಳಿ ನಡೆಸಲಾಗಿದ್ದು, ಕನಿಷ್ಠ 3೫ ಜನರು ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಇಬ್ಬರು ಇರಾಕ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಸದರ್ ನಗರದ ವಹೈಲತ್ ಮಾರುಕಟ್ಟೆಯಲ್ಲಿ ಈ ದಾಳಿ ನಡೆದಿದೆ ಎಂದು ಇರಾಕ್ ಮಿಲಿಟರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ಇಸ್ಲಾಮಿಕ್ ಸ್ಟೇಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಈದ್ ಅಲ್-ಅಧಾ ರಜಾದಿನದ ಒಂದು ದಿನ ಮೊದಲು ಮಾರುಕಟ್ಟೆಯು ಉಡುಗೊರೆಗಳು ಮತ್ತು ದಿನಸಿಸಾಮಾಗ್ರಿಗಳನ್ನು ಕೊಳ್ಳುತ್ತಿರುವಾಗ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಸರಕುಗಳ ರಾಶಿ ನೆಲದ ಮೇಲೆ ಚೆಲ್ಲಪಿಲ್ಲಿಯಾಗಿತ್ತು. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮಿಲಿಟರಿ ತಿಳಿಸಿದೆ.
ಘಟನೆ ಖಂಡಿಸಿರುವ ಪ್ರಧಾನಿ ಮುಸ್ತಾಫಾ ಅಲ್ –ಖದಿಮಿ ಅವರು ಭಧ್ರತಾ ಪಡೆಗಳ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಮಾಹಿತಿ ಪಡೆದಿದ್ದಾರೆ