ವಾಷಿಂಗ್ಟನ್, ಜು.20 (DaijiworldNews/HR): ಕೊರೊನಾದ ಎರಡನೇ ಅಲೆ ಹರಡುತ್ತಿದ್ದ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರಯಾಣಿಸುವ ಪ್ರಯಾಣಿಕರ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಅಮೇರಿಕಾವು ಇದೀಗ ಸಡಿಲಗೊಳಿಸಿದೆ ಎಂದು ತಿಳಿದು ಬಂದಿದೆ.
ಭಾರತ ಮತ್ತು ಪಾಕಿಸ್ತಾನಕ್ಕೆ ತೆರಳುವ ಪ್ರಯಾಣಿಕರಿಗಾಗಿ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಪ್ರಯಾಣಿಕರ ಸುರಕ್ಷತಾ ನಿರ್ಬಂಧಗಳನ್ನು ನಾಲ್ಕನೇ ಹಂತದಿಂದ ಮೂರನೇ ಹಂತಕ್ಕೆ ಇಳಿಸಲಾಗಿದೆ.
ಇನ್ನು ಸೋಮವಾರ ನಡೆದ ವಿದೇಶಾಂಗ ಇಲಾಖೆ ಸಭೆಯಲ್ಲಿ ಭಾರತ ಮತ್ತು ಅಮೇರಿಕಾದ ಕೊರೊನಾ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಬಂದಗಳನ್ನು ಸಡಿಲಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.