ಟೆರ್ನೆಟ್, ಜು.22 (DaijiworldNews/HR): ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ವೇಷದಲ್ಲಿ ವಿಮಾನ ಹತ್ತಿದ್ದು, ಇದಕ್ಕಾಗಿ ಹೆಂಡತಿಯ ನಕಲಿ ಗುರುತು ಚೀಟಿ ಮತ್ತು ಕೊರೊನಾ ನೆಗೆಟಿವ್ ಪ್ರಮಾಣಪತ್ರವನ್ನು ಬಳಸಿದ್ದು, ಜೊತೆಗೆ ತನ್ನ ಮುಖವನ್ನು ಬುರ್ಕಾದಿಂದ ಮುಚ್ಚಿದ ಘಟನೆ ಇಂಡೊನೇಷ್ಯಾದಲ್ಲಿ ನಡೆದಿದೆ.
ಜಕಾರ್ತಾದಿಂದ ಟೆರ್ನೆಟ್ನತ್ತ ಪ್ರಯಾಣಿಸುತ್ತಿದ್ದ ವಿಮಾನದ ಸಿಬ್ಬಂದಿಯೊಬ್ಬರು ಆತ ಶೌಚಾಲಯದಲ್ಲಿ ಬಟ್ಟೆ ಬದಲಾಯಿಸುವುದನ್ನು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ವ್ಯಕ್ತಿಯು ಹೆಂಡತಿಯ ಹೆಸರಿನಲ್ಲೇ ವಿಮಾನ ಟಿಕೆಟ್ ಖರೀದಿಸಿದ್ದು, ಅಲ್ಲದೆ ಇದಕ್ಕಾಗಿ ಆಕೆಯ ಗುರುತಿನ ಚೀಟಿ, ಕೊರೊನಾ ಪಿಸಿಆರ್ ಪರೀಕ್ಷೆಯ ವರದಿ ಮತ್ತು ಲಸಿಕಾ ಪ್ರಮಾಣ ಪತ್ರವನ್ನು ಕೂಡ ಬಳಸಿದ್ದಾನೆ.
ಇನ್ನು "ಆತನನ್ನು ವಿಮಾನದಿಂದ ಇಳಿಯುತ್ತಿದ್ದಂತೆ ಬಂಧಿಸಿ ಬಳಿಕ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಆತನನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ" ಎಂದು ಟೆರ್ನೆಟ್ ಪೊಲೀಸ್ ಮುಖ್ಯಸ್ಥ ಆದಿತ್ಯ ಲಕ್ಷಿಮದ ತಿಳಿಸಿದ್ದಾರೆ.