ಕಂದಹಾರ್ , ಜು 23 (DaijiworldNews/MS): ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಬಂದೂಕುಧಾರಿಗಳ ಗುಂಪು "100 ಕ್ಕೂ ಹೆಚ್ಚು ನಾಗರಿಕರನ್ನು" ಕೊಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೋಲೋ ನ್ಯೂಸ್ ಗುರುವಾರ ವರದಿ ಮಾಡಿದೆ.
ಆಂತರಿಕ ಸಚಿವಾಲಯವು ವರದಿಯನ್ನು ದೃಢಪಡಿಸಿದ್ದು "ನಾಗರಿಕರ ಹತ್ಯೆಗೆ"ಗಾಗಿ ತಾಲಿಬಾನ್ ಅನ್ನು ದೂಷಿಸಿದೆ.
ಸಚಿವಾಲಯದ ವಕ್ತಾರ ಮಿರ್ವಾಯಿಸ್ ಸ್ಟಾನೆಕ್ಜಾಯ್ ಪ್ರತಿಕ್ರಿಯಿಸಿ" ತಮ್ಮ ಪಾಕಿಸ್ತಾನದಲ್ಲಿರುವ ಮುಖಂಡ ಅಣತಿಯಂತೆ, ಕ್ರೂರ ಭಯೋತ್ಪಾದಕರು ಬೋಲ್ಡಾಕ್ ಗಡಿ ಪಟ್ಟಣದ ಕೆಲವು ಪ್ರದೇಶಗಳಲ್ಲಿ ಮುಗ್ಧ ಆಫ್ಘನ್ನರ ಮನೆಗಳ ಮೇಲೆ ಹೊಂಚು ಹಾಕಿ, ಮನೆಗಳನ್ನು ಲೂಟಿ ಮಾಡಿದ್ದಾರೆ ಮತ್ತು 100 ಮುಗ್ಧ ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ನಾಗರಿಕರ ಹತ್ಯೆಯಲ್ಲಿ ಗುಂಪಿನ ಕೈವಾಡವನ್ನು ನಿರಾಕರಿಸಿದ್ದಾರೆ ಎಂದು ಟೊಲೊ ವರದಿ ಮಾಡಿದೆ.