ಕಾಬೂಲ್, ಜು 26 (DaijiworldNews/PY): ಜು.27ರಿಂದ 2 ದಿನಗಳ ಕಾಲ ಅಮೇರಿಕಾದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನನು ಭೇಟಿಯಾಗಲಿದ್ದು, ಮಾತುಕತೆ ನಡೆಸಲಿದ್ದಾರೆ.
ಅಫ್ಘಾನಿಸ್ತಾನಲ್ಲಿ ಅಮೇರಿಕಾ ಹಾಗೂ ನ್ಯಾಟೋ ಪಡೆಗಳು ವಾಪಾಸ್ಸಾಗುತ್ತಿರುವಂತೆಯೇ ತಾಲಿಬಾನ್ ಉಗ್ರರ ಬಲವರ್ಧನೆ, ಮುಂದಿನ ಹಂತದ ಎರಡೂ ದೇಶಗಳ ನಡುವಿನ ರಕ್ಷಣೆ ಹಾಗೂ ವಿದೇಶಾಂಗ ಸಚಿವರ 2 ಪ್ಲಸ್ 2 ಸಭೆ. ಇದಕ್ಕಿಂತ ಮುನ್ನ ರಕ್ಷಣೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಣತಿಗಳ ವಿನಿಮಯ ಸೇರಿದಂತೆ ಹಲವಾರು ಮುಖ್ಯ ವಿಚಾರಗಳ ಬಗ್ಗೆ ಆಂಟನಿ ಬ್ಲಿಂಕೆನ್ ಅವರು ಕೇಂದ್ರ ಸರ್ಕಾರದ ಪ್ರಮುಖರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಲಸಿಕೆ ಪೂರೈಕೆಯ ಸಲುವಾಗಿ ಅಮೇರಿಕಾ ಸೇರಿದಂತೆ ಭಾರತ, ಆಸ್ಟ್ರೇಲಿಯಾ ಹಾಗೂ ಜಪಾನ್ ಸಹಕಾರ ನೀಡಿದೆ. ಭಾರತದಲ್ಲಿ ಉತ್ಪಾದನೆಯಾಗುವ ಲಸಿಕೆಗಳ ವಿತರಣೆ, ಬಂಡವಾಳ, ಆರೋಗ್ಯ, ಶಿಕ್ಷಣ, ಡಿಜಿಟಲ್ ಕ್ಷೇತ್ರದಲ್ಲಿ ಸಹಕಾರದ ವಿಚಾರವಾಗಿಯೂ ಚರ್ಚೆಯಾಗಲಿದೆ.
"ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷದ ಕಾರಣದಿಂದ ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ನ ಕೇಂದ್ರ ಸ್ಥಾನ ಕಂದಹಾರ್ನಿಂದ 22 ಸಾವಿರ ಕುಟುಂಬಗಳು ಓಡಿಹೋಗಿವೆ" ಎಂದು ನಿರ್ವಸಿತರ ವಿಭಾಗದ ಮುಖ್ಯಸ್ಥ ಮೊಹಮ್ಮದ್ ದರ್ಯಾಬ್ ತಿಳಿಸಿದ್ದಾರೆ.
ಭಾನುವಾರವೂ ಕಂದಹಾರ್ ನಗರದ ಹೊರಭಾಗದಲ್ಲಿ ಕದನ ಮುಂದುವರಿದಿದ್ದು, ಕಂದಾಹಾರ್ನಲ್ಲಿ ಎರಡನೇ ವಾರದ ಅವಧಿಯಲ್ಲಿ ಪತ್ರಕರ್ತರು ಸೇರಿ ಒಟ್ಟು 33 ಮಂದಿಯನ್ನು ಭಯೋತ್ಪಾದಕರು ಹತ್ಯೆಗೈದಿದ್ದಾರೆ.