ಬ್ರಿಟನ್, ಜು.27 (DaijiworldNews/HR): ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್ಗೆ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನ ನ್ಯಾಯಾಲಯವೊಂದು ಹೇಳಿರುವುದಾಗಿ ವರದಿಯಾಗಿದೆ.
ವಿಜಯ್ ಮಲ್ಯ ದಿವಾಳಿಯೆಂದು ಲಂಡನ್ ಹೈಕೋರ್ಟ್ ಚಾನ್ಸರಿ ವಿಭಾಗದ ವರ್ಚುಯಲ್ ವಿಚಾರಣೆ ವೇಳೆಯಲ್ಲಿಐಸಿಸಿ ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ತೀರ್ಪಿನಲ್ಲಿ ಹೇಳಿದ್ದಾರೆ.
ಇನ್ನು ವಿಜಯ್ ಮಲ್ಯ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಈ ತೀರ್ಪಿನಿಂದಾಗಿ ಅವಕಾಶ ಸಿಕ್ಕಂತಾಗಿದ್ದು, ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮಲ್ಯ ಇದೇ ವೇಳೆ ಹೇಳಿದ್ದು,ಇದಕ್ಕೆ ಅನುಮತಿ ನಿರಾಕರಿಸಲಾಗಿರುವುದಾಗಿ ವರದಿ ಹೇಳಿದೆ.
ಮೇನಲ್ಲಿ ಆನ್ಲೈನ್ ಮೂಲಕ ವಿಚಾರಣೆ ನಡೆಸಲಾಗಿದ್ದು, ಬ್ಯಾಂಕುಗಳು ಸಲ್ಲಿಸಿದ್ದ ದಿವಾಳಿತನದ ಅರ್ಜಿಯನ್ನು ತಿದ್ದುಪಡಿ ಮಾಡುವ ಕಾನೂನನ್ನು ಲಂಡನ್ ಹೈಕೋರ್ಟ್ ವಿಚಾರಣೆ ನಡೆಸಿತ್ತು ಎನ್ನಲಾಗಿದೆ.