ಕಾಬೂಲ್, ಆ 01 (DaijiworldNews/PY): ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಕಂದಹಾರ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ ನಡೆದಿದ್ದು, ವಿಮಾನ ನಿಲ್ದಾಣಕ್ಕೆ ಮೂರು ರಾಕೆಟ್ಗಳು ನುಗ್ಗಿದೆ. ಅಫ್ಘಾನಿಸ್ತಾನದ ಸೇನಾ ಪಡೆಗಳು ನಡೆಸುತ್ತಿರುವ ವಾಯು ದಾಳಿಯನ್ನು ತಡೆಯುವ ಸಲುವಾಗಿ ತಾಲಿಬಾನಿಗಳು ಈ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ರಾಕೆಟ್ ದಾಳಿಯ ಪರಿಣಾಮ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಪಡಿಸಿರುವುದಾಗಿ ಅಫ್ಘಾನಿಸ್ತಾನ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
"ದಾಳಿಯ ಪರಿಣಾಮ ವಿಮಾನ ಹಾರಾಟಕ್ಕೆ ಬಳಸುವ ರನ್ವೇಗೆ ಹಾನಿಯಾಗಿದೆ. ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ" ಎಂದಿದ್ದಾರೆ.
"ನಮ್ಮ ಮೇಲೆ ವಾಯುದಾಳಿ ನಡೆಸಲು ಶತ್ರುಪಡೆ ಬಳಸಿಕೊಳ್ಳುತ್ತಿರುವ ಕಾರಣ ನಾವು ಕಂದಾಹಾರ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿದೆವು" ಎಂದು ಭಾನುವಾರ ತಾನಿಬಾನ್ ವಕ್ತಾರ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.